ಮೊದಲ ಟ್ವೆಂಟಿ-20: ಭಾರತ ವಿರುದ್ಧ ವಿಂಡೀಸ್ 157/7
ಚೊಚ್ಚಲ ಪಂದ್ಯದಲ್ಲಿ ಮಿಂಚಿದ ರವಿ ಬಿಷ್ಣೋಯಿ, ಪೂರನ್ ಅರ್ಧಶತಕ

Photo: BCCI
ಕೋಲ್ಕತಾ, ಫೆ.16: ನಿಕೊಲಸ್ ಪೂರನ್ (61 ರನ್, 43 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟದ ನೆರವಿನಿಂದ ವೆಸ್ಟ್ಇಂಡೀಸ್ ತಂಡ ಭಾರತ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ.
ವಿಂಡೀಸ್ ಮೊದಲ ಓವರ್ನ 5ನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಬ್ರೆಂಡನ್ ಕಿಂಗ್ ಔಟಾದ ಬಳಿಕ ಜೊತೆಯಾದ ಕೈಲ್ ಮಯೆರ್ಸ್(31, 24 ಎಸೆತ, 7 ಬೌಂ.)ಹಾಗೂ ಪೂರನ್ 2ನೇ ವಿಕೆಟ್ಗೆ 47 ರನ್ ಗಳಿಸಿ ತಂಡವನ್ನು ಆಧರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ವಿಂಡೀಸ್ ಮತ್ತೆ ಕುಸಿತ ಕಂಡಿತು.
ಮಯೆರ್ಸ್, ರೋಸ್ಟನ್ ಚೇಸ್, ಪೊವೆಲ್ ಹಾಗೂ ಅಕೀಲ್ ಹುಸೇನ್ ಬೆನ್ನುಬೆನ್ನಿಗೆ ವಿಕೆಟ್ ಕೈಚೆಲ್ಲಿದರು. ಆಗ 6ನೇ ವಿಕೆಟ್ಗೆ 45 ರನ್ ಜೊತೆಯಾಟ ನಡೆಸಿದ ಪೂರನ್ ಹಾಗೂ ನಾಯಕ ಪೊಲಾರ್ಡ್(ಔಟಾಗದೆ 24)ತಂಡದ ಮೊತ್ತವನ್ನು 157ಕ್ಕೆ ತಲುಪಲು ನೆರವಾದರು.
ಈಡನ್ಗಾರ್ಡನ್ಸ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ರಾಜಸ್ಥಾನದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದರು.
17 ರನ್ಗೆ 2 ವಿಕೆಟ್ ಪಡೆದ ರವಿ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ಭಾರತದ 3ನೇ ಬೌಲರ್ ಎನಿಸಿಕೊಂಡರು. 2009ರಲ್ಲಿ ನಾಟಿಂಗ್ಹ್ಯಾಮ್ನಲ್ಲಿ ಬಾಂಗ್ಲಾದೇಶ ವಿರುದ್ಧ ಪ್ರಗ್ಯಾನ್ ಓಜಾ(4-21) ಹಾಗೂ 2015ರಲ್ಲಿ ಝಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಅಕ್ಷರ್ ಪಟೇಲ್(3-17) ಉತ್ತಮ ಬೌಲಿಂಗ್ ಸಂಘಟಿಸಿದ್ದರು.
ಇಂದು ಭಾರತದ ಪರ ರವಿ ಹಾಗೂ ಹರ್ಷಲ್ ಪಟೇಲ್(2-37) ತಲಾ 2 ವಿಕೆಟ್ ಗಳನ್ನು ಪಡೆದರು.







