ಉಳ್ಳಾಲ ದರ್ಗಾಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ

ಉಳ್ಳಾಲ : ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು.
ಉಳ್ಳಾಲ ದರ್ಗಾದ 21ನೇ ಪಂಚ ವಾರ್ಷಿಕ ಉರೂಸಿನ ಸಲುವಾಗಿ ಹಮ್ಮಿಕೊಂಡ ವಿವಿಧ ಕಾರ್ಯ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಅಬ್ದುಲ್ ರಶೀದ್ ಹಾಜಿಯವರ ದಕ್ಷ ನೇತೃತ್ವ ಮತ್ತು ಸುವ್ಯವಸ್ಥೆಯ ಕುರಿತು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಕಮಿಷನರ್ ಶಶಿಕುಮಾರ್ ರನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಶಾಲು ಹೊದಿಸಿ ಸನ್ಮಾನಿಸಿದರು.
ಡಿ.ವೈ.ಎಸ್.ಪಿ. ದಿನಕರ್ ಶೆಟ್ಟಿ, ಉಳ್ಳಾಲ ದರ್ಗಾ ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಉರೂಸ್ ಸಮಿತಿ ಸದಸ್ಯ ನಿಝಾಂ ಉಪಸ್ಥಿತರಿದ್ದರು.
Next Story





