ಉಳ್ಳಾಲ ಉರೂಸ್ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಉಳ್ಳಾಲ: ಸೈಯ್ಯದ್ ಮದನಿ ಖ.ಸ.ರವರ ಆಗಮನದಿಂದ ನಮ್ಮ ಕರಾವಳಿಯ ಮುಸ್ಲಿಮರು ಇಸ್ಲಾಮಿನ ಆಳ ಅರಿವು ಪಡಿಯುವಂತಾಯಿತು. ಉಳ್ಳಾಲ ಎಂದರೆ ಶಕ್ತತೆಯ ಪ್ರತೀಕ. ದಕ್ಷಿಣ ಭಾರತೀಯ ಮುಸ್ಲಿಮರಿಗೆ ಉಳ್ಳಾಲ ದರ್ಗಾ ಸಮರ್ಥ ನೇತೃತ್ವ ನೀಡಿದೆ ಎಂದು ಉಡುಪಿ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ಹೇಳಿದರು.
ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಇಸ್ಮಾಯಿಲ್ ಮದನಿ ಮಾವಿನ ಕಟ್ಟೆಯವರು ಉಳ್ಳಾಲ ಉರೂಸಿನ ಸುವ್ಯವಸ್ಥಿತ ನಿರ್ವಹಣೆಯನ್ನು ಶ್ಲಾಘಿಸಿ, ಸಮಯೋಚಿತವಾಗಿ ಮಾತನಾಡಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮಾತನಾಡಿ, ಉಳ್ಳಾಲ ದರ್ಗಾದ ವತಿಯಿಂದ ಸ್ಥಾಪನೆಯಾದ ವಿದ್ಯಾ ಕೇಂದ್ರ ಗಳು ಮತ್ತು ಮಸೀದಿ, ಮದ್ರಸಗಳ ಹಿಂದೆ ದಿವಂಗತ ಯುಕೆ.ಇಬ್ರಾಹಿಂ ಹಾಜಿ ಮತ್ತು ಅವರೊಂದಿಗೆ ಉಳ್ಳಾಲ ದರ್ಗಾದ ಆಡಳಿತ ಸಮಿತಿಯಲ್ಲಿ ಹಿರಿಯರು ಕಾರಣರಾಗಿದ್ದಾರೆ. ಆ ಮಹನೀಯರ ಸೇವೆಗೆ ನಾವು ಆಬಾರಿಯಾಗಿದ್ದೇವೆ ಎಂದು ನಾಡಿನ ಅಗಲಿದ ಗಣ್ಯರ ಕೊಡುಗೆಯನ್ನು ಸ್ಮರಿಸಿ ಕೊಂಡರು.
ಮುಖ್ಯ ಮತ ಪ್ರವಚನವನ್ನು ಖ್ಯಾತ ಇಸ್ಲಾಮಿ ಸಂಶೋಧಕ, ಉಪನ್ಯಾಸ ಕಾರ ಡಾಕ್ಟರ್ ಫಾರೂಕ್ ನಈಮಿ ಕೊಲ್ಲಂ. ಸಭೆಯನ್ನುದ್ದೇಶಿಸಿ ಅಲ್ಲಾಹನ ಅಪಾರ ಕೊಡುಗೆ ಯನ್ನು ಅನುಭವಿಸುವ ಮನುಷ್ಯ ರಾದ ನಾವು ಅಲ್ಲಾಹನನ್ನು ಅರಿಯ ಬೇಕಿದೆ. ಅಲ್ಲಾಹನ ಆದೇಶದ ಪಾಲನೆಯೊಂದೇ ವಿಜಯದ ರಹದಾರಿ ಎಂದರು.
ವೇದಿಕೆಯಲ್ಲಿ ಉಸ್ಮಾನ್ ಫೈಝಿ ತೋಡಾರ್ ಉಸ್ತಾದ್, ಇಮಾಂ ಅನ್ವರ್ ಅಲಿ ದಾರಿಮಿ, ಸಲೀಂ ಮದನಿ , ಹಾಜಿ ಮುಹಮ್ಮದ್ ನೇರಳಕಟ್ಟೆ, ಮುಹಮ್ಮದ್ ಕುಂಞಿ ಅಂಜದಿ, ಅಶ್ರಫ್ ಸಅದಿ ಮಲ್ಲೂರು, ಶಾಫಿ ಮದನಿ, ಮುಫತ್ತಿಸ್ ಶಾಫಿ ಮದನಿ, ಐ.ಎಂ.ಕೆ.ಮದನಿ, ಇಬ್ರಾಹಿಂ ಮದನಿ, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಯು.ಟಿ.ಇಲ್ಯಾಸ್, ಉಳ್ಳಾಲ ನಗರ ಸಭೆ ನಿಕಟ ಪೂರ್ವ ಅಧ್ಯಕ್ಷ ಹುಸೇನ್ ಕುಂಞ ಮೋನು, ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಹಾಜಿ, ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲ, ಮೊಯ್ದಿನಬ್ಬ ಅಝಾದ್ ನಗರ, ಯು.ಪಿ. ಹಮೀದ್ ಅಲೇಕಲಾ, ಕೆನರಾ ಅಬ್ಬಾಸ್ ಹಾಜಿ, ಜಮಾಲ್ ಬಾರ್ಲಿ, ಪಂಪ್ ವೆಲ್ ಮಸೀದಿ ಖತೀಬ್, ಖಾದರ್ ಹಾಜಿ, ಇಬ್ರಾಹಿಂ ಅಹ್ಸನಿ, ಪಾತೂರು ಮದನಿ ಮುಂತಾದವರು ಉಪಸ್ಥಿತರಿದ್ದರು.







