ಮೊದಲ ಟ್ವೆಂಟಿ-20: ವೆಸ್ಟ್ಇಂಡೀಸ್ನ್ನು ಮಣಿಸಿದ ಭಾರತ ಶುಭಾರಂಭ
ಚೊಚ್ಚಲ ಪಂದ್ಯದಲ್ಲಿ ಮಿಂಚಿದ ರವಿ ಬಿಷ್ಣೋಯಿ, ಪೂರನ್ ಅರ್ಧಶತಕ ವ್ಯರ್ಥ

ರೋಹಿತ್ ಶರ್ಮಾ, Photo:BCCI
ಕೋಲ್ಕತಾ, ಫೆ.16: ಮೊದಲ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತವು ವೆಸ್ಟ್ಇಂಡೀಸ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಮಣಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಗೆಲ್ಲಲು 158 ರನ್ ಗುರಿ ಪಡೆದ ಭಾರತ 18.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಇಶಾನ್ ಕಿಶನ್(35 ರನ್, 42 ಎಸೆತ, 4 ಬೌಂಡರಿ) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(40 ರನ್, 19 ಎಸೆತ, 4 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್ಗೆ 64 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿದರು.
ಮಾಜಿ ನಾಯಕ ವಿರಾಟ್ ಕೊಹ್ಲಿ(17), ರಿಷಭ್ ಪಂತ್(8)ನಿರಾಶೆಗೊಳಿಸಿದರು. ಸೂರ್ಯಕುಮಾರ್ ಯಾದವ್(ಔಟಾಗದೆ 34)ಹಾಗೂ ವೆಂಕಟೇಶ್ ಅಯ್ಯರ್(ಔಟಾಗದೆ 24) 5ನೇ ವಿಕೆಟಿಗೆ 48 ರನ್ ಜೊತೆಯಾಟ ನಡೆಸಿ ಇನ್ನೂ 7 ಎಸೆತ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅಗ್ರ ಕ್ರಮಾಂಕದ ಬ್ಯಾಟರ್ ನಿಕೊಲಸ್ ಪೂರನ್ (61 ರನ್, 43 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟ ನೀಡಿದ ಹೊರತಾಗಿಯೂ ಭಾರತವು ವೆಸ್ಟ್ಇಂಡೀಸ್ ತಂಡವನ್ನು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ಇಂಡೀಸ್: 20 ಓವರ್ಗಳಲ್ಲಿ 157/7
(ನಿಕೊಲಸ್ ಪೂರನ್ 61, ಮಯೆರ್ಸ್ 31, ಪೊಲಾರ್ಡ್ ಔಟಾಗದೆ 24, ರವಿ ಬಿಷ್ಣೋಯಿ 2-17, ಹರ್ಷಲ್ ಪಟೇಲ್ 2-37)
ಭಾರತ:18.5 ಓವರ್ಗಳಲ್ಲಿ 162/4
(ರೋಹಿತ್ ಶರ್ಮಾ 40, ಇಶಾನ್ ಕಿಶನ್ 35, ಸೂರ್ಯಕುಮಾರ್ ಔಟಾಗದೆ 34, ವೆಂಕಟೇಶ್ ಔಟಾಗದೆ 24, ರೋಸ್ಟನ್ ಚೇಸ್ 2-14)







