ಉಡುಪಿ ಸುಲ್ತಾನ್ ಗೋಲ್ಡ್‌ನಲ್ಲಿ ಪ್ರಿಮಿಯಂ ವಾಚ್ ಸಂಗ್ರಹ ಅನಾವರಣ
ಉಡುಪಿ, ಫೆ.17: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ಪ್ರಿಮಿಯಂ ವಾಚ್ ಸಂಗ್ರಹವನ್ನು ಉಡುಪಿಯ ಬೃಂದಾವನ ಹೊಟೇಲಿನ ಆಡಳಿತ ನಿರ್ದೇಶಕ ಹುಸೈನ್ ಗುರುವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಬೇರೆ ಎಲ್ಲ ಮಳಿಗೆಗಿಂತ ಉಡುಪಿಯ ಸಿಬ್ಬಂದಿಗಳು ಗ್ರಾಹಕರಿಗೆ ನಗುಮುಖದ ಸೇವೆಯನ್ನು ನೀಡುತ್ತಾರೆ. ಪ್ರೀತಿ ಹಾಗೂ ಗೌರವದ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದಾರೆ. ಇದಕ್ಕೆ ಉಡುಪಿಯ ಮಣ್ಣಿನ ಗುಣವೇ ಕಾರಣ ಎಂದು ತಿಳಿಸಿದರು.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಸುಲ್ತಾನ್ ಗ್ರೂಪ್‌ನ ಉಡುಪಿ ಪ್ಲೋರ್ ಮೆನೇಜರ್ ಸಿದ್ಧಿಕ್ ಹಸನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಡುಪಿ ಸುಲ್ತಾನ್ ಗೋಲ್ಡ್‌ನ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಅಸಿಸ್ಟೆಂಟ್ ಸೇಲ್ಸ್ ಮೆನೇಜರ್‌ಗಳಾದ ಶಾಮಿಲ್ ಅಬ್ದುಲ್ ಖಾದರ್, ನಝೀರ್ ಅಡ್ಡೂರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.