ಕುಡುಪು ಘನತ್ಯಾಜ್ಯ ಘಟಕದಲ್ಲಿ ಪ್ರಾಕೃತಿಕ ವಿಕೋಪ; ಸಂತ್ರಸ್ತರಿಗೆ ಬಾಕಿ ಪರಿಹಾರ ಪಾವತಿಗೆ ಕ್ರಮ: ಡಿಸಿ
ಮಂಗಳೂರು, ಫೆ.17: ಗುರುಪುರ ಹೋಬಳಿಯ ಕುಡುಪು ಗ್ರಾಮದಲ್ಲಿ ಘನತ್ಯಾಜ್ಯ ಲ್ಯಾಂಡ್‌ಫಿಲ್ ಘಟಕದಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಹಾನಿಗೊಳಗಾದ 39 ಸಂತ್ರಸ್ತರಿಗೆ 16,27,52,229 ರೂ.ಗಳ ಮಧ್ಯಂತರ ಪರಿಹಾರ ಪಾವತಿಸಲಾಗಿದೆ. ಸರಕಾರದಿಂದ ಭೂಸ್ವಾಧೀನ ಅಂತಿಮ ಅಧಿಸೂಚನೆ ಅನುಮೋದನೆಯಾದ ಬಳಿಕ ಉಳಿಕೆ ಪರಿಹಾರವನ್ನು ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
ಘನತ್ಯಾಜ್ಯ ಭೂಕುಸಿತದಿಂದ 17.24.17 ಎಕರೆ ಜಮೀನುಗಳನ್ನು ಭೂಸ್ವಾಧೀನಪಡಿಸಲು 2021ರ ಜುಲೈ 14ರಂದು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದರಂತೆ ಜಮೀನುಗಳ ಜಂಟಿ ಅಳತೆ ಕೆಲಸ ಪೂರೈಸಲಾಗಿದ್ದು, 17,23,09 ಎಕರೆ ಜಮೀನುಗಳ ಭೂಸ್ವಾಧೀನತೆಗೆ ಒಳಪಟ್ಟಿರುತ್ತದೆ. ಇದರ ಕರಡು ಅಧಿಸೂಚನೆಯನ್ನು ತಯಾರಿಸಿ ಸರಕಾರದ ಅನುಮೋದನೆಗೆ ಸಲ್ಲಿಸಲಾಗಿದೆ. ಜಂಟಿ ಅಳತೆ ನಕ್ಷೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ವಿಶೇಷ ಭೂಸ್ವಾಧೀನಾಧಿಕಾರಿಯ ಕಚೇರಿಯಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
Next Story