ಶಿಕ್ಷಣ, ಗುರುಗಳನ್ನು ಗೌರವಿಸುವುದು ಇಸ್ಲಾಮಿನ ಸಂಸ್ಕೃತಿ: ಸೆಯ್ಯದ್ ನಝ್ಮುದ್ದೀನ್ ತಂಙಳ್
ಉಳ್ಳಾಲ: ಇಸ್ಲಾಂ ಧರ್ಮದ ಪ್ರತಿಯೊಂದು ನಿರ್ದೇಶನ ವು ವೈಜ್ಞಾನಿಕವಾಗಿ ಸಮರ್ಥಿಸಲು ಸಾಧ್ಯವಿದೆ ಎಂದು
ಎಂದು ಸೆಯ್ಯದ್ ನಝ್ಮುದ್ದೀನ್ ತಂಙಳ್ ಹೇಳಿದರು.
ಅವರು ಉಳ್ಳಾಲ ಉರೂಸ್ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಮತ್ತು ಗುರುಗಳನ್ನು ಗೌರವಿಸುವುದು ಇಸ್ಲಾಮಿನ ಸಂಸ್ಕೃತಿ. ಇದನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಅಬ್ದುಲ್ ರಹಿಮಾನ್ ಪೂಕೋಯ ತಂಙಳ್ ಮಾತನಾಡಿ, ಔಲಿಯಾ ಶಿರೋಮಣಿ ಗಳು ಆದರ್ಶ ಬದುಕು ನಮ್ಮ ಜೀವನ ದಲ್ಲಿ ಅಳವಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮಾತನಾಡಿ, ಉಳ್ಳಾಲ ತಂಙಳ್ ರವರ ಕರಾಮತ್ತು ಏನು ಎಂದು ಎಲ್ಲರಿಗೂ ಗೊತ್ತಾಗಿದೆ. ಧಾರ್ಮಿಕ ಪಂಡಿತರು ಸೆಯ್ಯದ್ ಮದನಿ ತಂಙಳ್ ರವರ ಬಗೆ ಹೇಳುತ್ತಾರೆ ಎಂದರು.
ಅಸ್ಲಾಂ ಅಝರಿಯಾ ಕಣ್ಣೂರು ಮುಖ್ಯ ಪ್ರಭಾಷಣ ಮಾಡಿದರು. ಖ್ಯಾತ ವಾಗ್ಮಿ ಅಬ್ದುಲ್ ಹಮೀದ್ ಫೈಝಿ ಅಂಬಲಕಡವು ಸಭೆಯನ್ನು ಉದ್ದೇಶಿಸಿ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸೆಯ್ಯದ್ ಇಂಬಿಚ್ಚಿಕೋಯ ತಂಙಳ್ ,ಉಸ್ಮಾನ್ ಫೈಝಿ ತೋಡಾರ್ ಉಸ್ತಾದ್, ಇಮಾಂ ಅನ್ವರ್ ಅಲಿ ದಾರಿಮಿ, ಅನಸ್ ತಂಙಳ್ ಕರ್ವೆಲ್, ಸೆಯ್ಯದ್ ಶರ್ಫುದ್ದೀನ್ ತಂಙಳ್, ಮಜೀದ್ ದಾರಿಮಿ ಪಯ್ಯಕ್ಕಿ, ಹಾರೂನ್ ಅಹ್ಸನಿ, ಶಾಹುಲ್ ಹಮೀದ್ ಮೆಟ್ರೋ, ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಹಮೀದ್ ಮಡಿಕೇರಿ, ಇಬ್ರಾಹಿಂ ಕೊಣಾಜೆ, ನಝೀರ್ ಉಳ್ಳಾಲ್, ಯು ಎಚ್ ಫಾರೂಕ್, ಚೆಂಬು ಗುಡ್ಡೆ ಮಸೀದಿ ಅಧ್ಯಕ್ಷ ಇಂತಿಯಾಝ್, ಪಿಲಾರ್ ಮಸೀದಿ ಅಧ್ಯಕ್ಷ ಮೊಹಮ್ಮದ್ ಅಸ್ಲಂ ಕಾರ್ಯದರ್ಶಿ ನಝ್ರತ್, ಹಮ್ಮಬ್ಬ ಕೋಟೆಪುರ, ಅದ್ದು ಕೋಟೆಪುರ, ಅಬೂಬಕ್ಕರ್ ಮುಕಚೇರಿ, ಇಸ್ಮಾಯಿಲ್ ಯಮನಿ, ಹುಸನ್ ಹಾಜಿ ಸಾಂಬಾರ್ ತೋಟ, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಆಸೀಫ್ ಅಬ್ದುಲ್ಲಾ, ಅಬ್ದುಲ್ ರಹಿಮಾನ್ ತಬೂಕು ದಾರಿಮಿ ಮುಂತಾದವರು ಉಪಸ್ಥಿತರಿದ್ದರು.







