ಉಳ್ಳಾಲ ಉರೂಸ್; ಫೆ.18ರಂದು ಮುಹಮ್ಮದ್ ಕಾಮಿಲ್ ಸಖಾಫಿ ಪ್ರಭಾಷಣ
ಮಂಗಳೂರು : ಉಳ್ಳಾಲ ಉರೂಸ್ ಪ್ರಯುಕ್ತ ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಸಯ್ಯಿದ್ ಮುಸ್ತಾಕು ರ್ರಹ್ಮಾನ್ ತಂಙಳ್, ಚಟ್ಟಿಕಲ್ ದುಆ ಆಶೀರ್ವಚನ ನೀಡಲಿದ್ದಾರೆ.
ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಪ್ರಭಾಷಣ ಮಾಡಲಿದ್ದು, ಲಹ್ಮಾನ್ ಹಕೀಂ ಸಖಾಫಿ ಬಂಟ್ವಾಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಝುಬೈರ್ , ಹಾಜಿ ಅಹ್ಮದ್ ಬಾವ ಸಹಿತ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಉರೂಸ್ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story