ಬೆಂಗಳೂರಿನಲ್ಲಿ ನಕಲಿ ತುಪ್ಪ ತಯಾರಿಕ ಘಟಕದ ಮೇಲೆ ದಾಳಿ: ಓರ್ವನ ಬಂಧನ

ಬೆಂಗಳೂರು, ಫೆ.17: ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿರುವ ಮಾದನಾಯಕನ ಹಳ್ಳಿ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಬಾಬು ಲಾಲ್ ಬಂಧಿತನಾಗಿದ್ದು, ಈತನಿಂದ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ತುಪ್ಪ ಹಾಗೂ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನು ನಕಲಿ ತುಪ್ಪ ತಯಾರಿಸಿ ಶುದ್ಧ ನಂದಿನಿ ಬ್ರಾಂಡ್‍ನ ಲೇಬಲ್ ಹಾಕಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಮಾದನಾಯಕನಹಳ್ಳಿಯ ಬೈಯಂಡಳ್ಳಿಯಲ್ಲಿ ಆರೋಪಿಯು ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕ ನಡೆಸುತ್ತಿದ್ದು ಈ ಸಂಬಂಧ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story





