'ಭೋಜರಾಜ್ ಎಂಬಿಬಿಎಸ್' ತುಳು ಚಲನಚಿತ್ರ ತೆರೆಗೆ

ಮಂಗಳೂರು, ಫೆ.18: ದರ್ಬಾರ್ ಸಿನೆಮಾಸ್ ಬ್ಯಾನರಿನಲ್ಲಿ ಪ್ರಭಾ ನಾರಾಯಣ ಸುವರ್ಣ ಮುಂಬೈ ಅರ್ಪಿಸುವ ರಫೀಕ್ ದರ್ಬಾರ್ ನಿರ್ಮಾಣದ ಫರ್ವೇಝ್ ಬೆಳ್ಳಾರೆ, ಶರಣ್ ರಾಜ್, ಸುವರ್ಣ ಕಾಸರಗೋಡು ಸಹ ನಿರ್ಮಾಣದ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದಲ್ಲಿ ತಯಾರಾದ ಭೋಜರಾಜ್ ಎಂಬಿಬಿಎಸ್ ತುಳು ಚಲನ ಚಿತ್ರದ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ನಡೆಯಿತು.
ಚಲನಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ರಂಗನಟ ವಿ.ಜಿ. ಪಾಲ್, ಕರ್ನಾಟಕ ಮಾಧ್ಯಮ ಅಕಾಡಮಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ರಫೀಕ್ ದರ್ಬಾರ್, ಪ್ರಭಾ ಸುವರ್ಣ, ನಾರಾಯಣ ಸುವರ್ಣ, ಸುಮಲತ ಸುವರ್ಣ ಉಪಸ್ಥಿತರಿದ್ದರು.
Next Story