ಫೆ.19ರಿಂದ ಕೇಂದ್ರ ಉಕ್ಕು ಖಾತೆ ಸಚಿವರ ದ.ಕ.ಜಿಲ್ಲಾ ಪ್ರವಾಸ
ಮಂಗಳೂರು, ಫೆ.18: ಕೇಂದ್ರದ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಫೆ.19ರಿಂದ 21ರವರೆಗೆ ದ.ಕ.ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಫೆ.19ರ ಮಧ್ಯಾಹ್ನ 12:30ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಮಧ್ಯಾಹ್ನ 1 ಗಂಟೆಗ ಓಷ್ಯನ್ ಪರ್ಲ್ ಹೋಟೆಲ್ಗೆ ಆಗಮಿಸುವರು. 2:15ಕ್ಕೆ ಕುದುರೆಮುಖ ಅದಿರು ಕಂಪನಿ ವತಿಯಿಂದ ಕಾವೂರಿನಲ್ಲಿ ಕೆಐಒಸಿಎಲ್ ನ ವಸತಿ ಸಮುಚ್ಚಯಕ್ಕೆ ಶಂಕು ಸ್ಥಾಪನೆ ನೆರವೇರಿಸುವರು. ಅಲ್ಲದೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಅಪರಾಹ್ನ 3ಕ್ಕೆ ಪಣಂಬೂರಿಗೆ ಆಗಮಿಸುವ ಅವರು ಪಿಪಿಯು ಮಾದರಿ ಕೊಠಡಿಗಳನ್ನು ಪರಿಶೀಲಿಸುವರು, 3:30ರಿಂದ ಪಿಪಿಯು ಕೊಠಡಿಯಲ್ಲಿ ಸಿಎಂಡಿ, ನಿರ್ದೇಶಕರು ಹಾಗೂ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಭೆ ನಡೆಸುವರು. 4ರಿಂದ ಪಣಂಬೂರಿನಲ್ಲಿರವ ಫಿಲ್ಟರ್, ಪೆಲ್ಲೆಟ್ ಪ್ಲಾಂಟ್ಗಳಿಗೆ ಭೇಟಿ ನೀಡುವರು. ನಂತರ ನಗರದಲ್ಲಿ ವಾಸ್ತವ್ಯ ಮಾಡುವರು.
ಫೆ.20ರ ಬೆಳಗ್ಗೆ 8:45ಕ್ಕೆ ಪಣಂಬೂರಿನಲ್ಲಿ ಕೊಕ್ ಓವನ್ ಪ್ಲಾಂಟ್‌ಗೆ ಭೂಮಿ ಪೂಜೆ ನೆರವೇರಿಸುವರು. 10:45ಕ್ಕೆ ಎನ್‌ಎಂಪಿಟಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. 2:15ಕ್ಕೆ ಕುದುರೆ ಮುಖಕ್ಕೆ ತೆರಳಿ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡುವರು.
ಫೆ.21ರ ಸಂಜೆ 4:30ಕ್ಕೆ ಹೊಸದಿಲ್ಲಿಗೆ ತೆರಳುವರು ಎಂದು ಸಚಿವರ ಹೆಚ್ಚುವರಿ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





