ಬೆಂಗಳೂರು: ನಟನಿಂದ ಹಲ್ಲೆ ಆರೋಪ; ದೂರು ದಾಖಲು

ಬೆಂಗಳೂರು, ಫೆ.18: ಕನ್ನಡ ಚಿತ್ರರಂಗದ ನಟ ಧನ್ವೀರ್ ಗೌಡ ಅವರಿಂದ ಹಲ್ಲೆ ನಡೆದಿದ್ದು, ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಇಲ್ಲಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದ್ರಶೇಖರ್ ಎಂಬುವರು ದೂರು ನೀಡಿದ್ದು, ಗುರುವಾರ ರಾತ್ರಿ ಎಸ್‍ಸಿ ರಸ್ತೆಯ ಅನುಪಮಾ ಚಿತ್ರಮಂದಿರ ಬಳಿ ಸ್ನೇಹಿತನ ಜೊತೆ ಮನೆಗೆ ತೆರಳುತ್ತಿದ್ದ ವೇಳೆ ನಟ ಧನ್ವೀರ್ ಕಂಡು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ.
ಆದರೆ, ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ಬೇಡ ಬಿಡು ಇನ್ನೊಬ್ಬನ ಜೊತೆ ಫೊಟೊ ತೆಗೆಸಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಧನ್ವೀರ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಉಪ್ಪಾರಪೇಟೆ ಠಾಣೆಗೆ ಹಲ್ಲೆಗೊಳಗಾದ ಚಂದ್ರಶೇಖರ್ ದೂರು ನೀಡಿದ್ದು, ಎನ್‍ಸಿಆರ್ ದಾಖಲಿಸಿಕೊಂಡಿದ್ದಾರೆ.
Next Story





