Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಷ್ಟ್ರಧ್ವಜಕ್ಕೆ ಅವಮಾನ...

ರಾಷ್ಟ್ರಧ್ವಜಕ್ಕೆ ಅವಮಾನ ದೇಶದ್ರೋಹವಲ್ಲವೇ?

ವಾರ್ತಾಭಾರತಿವಾರ್ತಾಭಾರತಿ19 Feb 2022 12:05 AM IST
share
ರಾಷ್ಟ್ರಧ್ವಜಕ್ಕೆ ಅವಮಾನ ದೇಶದ್ರೋಹವಲ್ಲವೇ?

ಭಾರತದ ರಾಷ್ಟ್ರಧ್ವಜದ ಬಗ್ಗೆ ಅಗೌರವದ ಮಾತನ್ನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕೋಲಾಹಲದ ವಾತಾವರಣ ಉಂಟಾಗಿ ಸದನದ ಕಲಾಪದಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ. ಸದನದ ಈ ಪರಿಸ್ಥಿತಿಗೆ ಯಾರು ಕಾರಣ ಎಂಬುದು ಸದನದ ಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಹಿರಿಯ ಸಚಿವರಾಗಿ ಈಶ್ವರಪ್ಪನವರು ಘನತೆಯಿಂದ ನಡೆದುಕೊಂಡಿದ್ದರೆ, ಆಡಿದ ಮಾತಿಗೆ ಕನಿಷ್ಠ ವಿಷಾದವನ್ನು ವ್ಯಕ್ತಪಡಿಸಿದ್ದರೆ ಪ್ರತಿಪಕ್ಷಗಳ ಆಕ್ರೋಶ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸದಸ್ಯ ಡಿ.ಕೆ.ಶಿವಕುಮಾರ್ ಬಗ್ಗೆ ಈಶ್ವರಪ್ಪಮಾಡಿದ ವೈಯಕ್ತಿಕ ಟೀಕೆ, ಆಡಬಾರದ ಸಭ್ಯವಲ್ಲದ ಮಾತು ಪರಿಸ್ಥಿತಿ ಹದಗೆಡಲು ಕಾರಣ. ಈಶ್ವರಪ್ಪನವರಿಗಿಂತ ತಾನೇನು ಕಡಿಮೆ ಎಂದು ಡಿ.ಕೆ. ಶಿವಕುಮಾರ್ ಕೂಡ ಕೂಗಾಡಿದ್ದು ಸರಿಯಲ್ಲ. ಸದನದ ಕಲಾಪ ಆರಂಭವಾದ ಮೊದಲ ದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವಿಷಯ ಪ್ರಸ್ತಾಪಿಸಿ ರಾಷ್ಟ್ರಧ್ವಜಕ್ಕೆ ಅಪಚಾರ ಎಸಗಿದ ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಿ ದೇಶದ್ರೋಹದ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂಬ ಆಗ್ರಹ ಸಹಜವಾಗಿತ್ತು.ಇದಕ್ಕೆ ಈಶ್ವರಪ್ಪಸೂಕ್ತ ಸಮಜಾಯಿಷಿ ನೀಡಿದ್ದರೆ, ಕನಿಷ್ಠ ಕ್ಷಮಾಪಣೆ ಕೇಳಿದ್ದರೆ ವಾತಾವರಣ ತಿಳಿಯಾಗುತ್ತಿತ್ತು. ಆದರೆ ಅವರು ತಾವು ಆಡಿದ ಮಾತಿನ ಬಗ್ಗೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ವಾಸ್ತವವಾಗಿ ರಾಷ್ಟ್ರಧ್ವಜದ ಬಗ್ಗೆ ಯಾರೇ ಅಪಚಾರದ ಮಾತುಗಳನ್ನಾಡಲಿ ಅಂತಹವರನ್ನು ದಂಡನೆಗೆ ಗುರಿಪಡಿಸಲೇಬೇಕಾಗುತ್ತದೆ. ಕಳೆದ ವರ್ಷ ರಾಜಧಾನಿ ದಿಲ್ಲಿಯಲ್ಲಿ ರೈತ ಚಳವಳಿ ನಡೆದ ಸಂದರ್ಭದಲ್ಲಿ ರಾಷ್ಟ್ರಧ್ವಜದ ಕೆಳಗೆ ರೈತ ಧ್ವಜವನ್ನು ಹಾರಿಸಿದ ಕಾರಣಕ್ಕಾಗಿ ಅಲ್ಲಿ ಕೆಲವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಇದೇ ಮಾನದಂಡ ಅನುಸರಿಸಿ ಈಶ್ವರಪ್ಪನವರನ್ನು ರಾಜೀನಾಮೆ ಕೊಡಿಸಿ ಪ್ರಕರಣ ದಾಖಲಿಸಿದ್ದರೆ ಸೂಕ್ತವಾಗುತ್ತಿತ್ತು. ಇದರ ಬದಲಾಗಿ ಸರಕಾರದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈಶ್ವರಪ್ಪನವರ ಮಾತುಗಳನ್ನು ಸಮರ್ಥಿಸುತ್ತಿದ್ದಾರೆ.

ಸಂಘ ಪರಿವಾರದಲ್ಲಿ ಬೆಳೆದವರಿಗೆ ಸಂವಿಧಾನ ಮತ್ತು ಭಾರತದ ರಾಷ್ಟ್ರ ಧ್ವಜದ ಬಗ್ಗೆ ಎಂತಹ ಅಭಿಪ್ರಾಯ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಿಜೆಪಿ ನಾಯಕರಿಂದ ಮಾತ್ರವಲ್ಲ ಚುನಾಯಿತ ಪ್ರತಿನಿಧಿಗಳಿಂದ ಸಂವಿಧಾನ ಮತ್ತು ರಾಷ್ಟ್ರಧ್ವಜದ ಬಗ್ಗೆ ಅಪಚಾರದ ಮಾತುಗಳು ಆಗಾಗ ಬರುತ್ತಲೇ ಇರುತ್ತವೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ ಹಿಂದೊಮ್ಮೆ ‘‘ಸಂವಿಧಾನ ಬದಲಾವಣೆ ಮಾಡುತ್ತೇವೆ’’ ಎಂದಿದ್ದರು. ನಾಗಪುರದಲ್ಲಿ ಇರುವ ಆರೆಸ್ಸೆಸ್ ಮುಖ್ಯ ಕಚೇರಿಯ ಮೇಲೆ ಹಾರಾಡುತ್ತಿರುವುದು ಭಗವಾಧ್ವಜ ಮಾತ್ರ. ಭಾರತದ ತ್ರಿವರ್ಣ ಧ್ವಜವನ್ನು ಸಂಘ ಎಂದೂ ಒಪ್ಪಿಕೊಳ್ಳುವುದಿಲ್ಲ. ಈಗೇನೋ ಮಂತ್ರಿಗಳಾದ ಕಾರಣಕ್ಕಾಗಿ ಸಂಘಪರಿವಾರದಿಂದ ಬಂದ ಕೆಲವರು ರಾಷ್ಟ್ರಧ್ವಜಕ್ಕೆ ಕಾಟಾಚಾರದ ವಂದನೆಯನ್ನು ಸಲ್ಲಿಸಿದರೂ ಅವರ ನಿಜವಾದ ನಿಷ್ಠೆ ಇರುವುದು ಸಂಘದ ಕೇಸರಿ ಧ್ವಜಕ್ಕೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿಯೇ ಈಶ್ವರಪ್ಪನವರು ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳಿದ್ದಾರೆ. ಆದರೆ ಸಂವಿಧಾನದ ಬದಲಾಗಿ ಭಗವಾಧ್ವಜ ಬಂದರೆ ತನ್ನ ಪರಿಸ್ಥಿತಿ ಏನಾಗುತ್ತದೆ ಎಂದು ಪಾಪ ಈಶ್ವರಪ್ಪನವರಿಗೂ ಗೊತ್ತಿಲ್ಲ. ಸಿದ್ದರಾಮಯ್ಯನವರು ಹೇಳಿದಂತೆ ಭಾರತ ಹಿಂದೂರಾಷ್ಟ್ರವಾದರೆ ಈಶ್ವರಪ್ಪ ಕುರಿ ಕಾಯ್ದುಕೊಂಡು, ಕಸ ಹೊಡೆದುಕೊಂಡು ಇರಬೇಕಾಗುತ್ತದೆ. ಇದರ ಅರಿವಿಲ್ಲದೆ ಸಂಘದ ನಾಯಕರು ಕಿವಿಯಲ್ಲಿ ಹೇಳಿದ್ದನ್ನು ಸುದ್ದಿ ವಾಹಿನಿಗಳ ಮೈಕ್‌ಗಳ ಮುಂದೆ ಹೇಳಿ ಈಶ್ವರಪ್ಪಇಕ್ಕಟ್ಟಿಗೆ ಸಿಲುಕಿದ್ದಾರೆ. ನಾಗಪುರದ ಗುರುಗಳು ಇಂತಹ ಶೂದ್ರ ಸಮುದಾಯಗಳ ನಾಯಕರಿಂದ ವಿವಾದಾತ್ಮಕ ಹೇಳಿಕೆ ನೀಡಿಸಿ ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ ತಮ್ಮ ಮುಂದಿನ ಕಾರ್ಯತಂತ್ರ ರೂಪಿಸುತ್ತಾರೆ. ಈಶ್ವರಪ್ಪನಂತಹವರು ಕೊನೆಗೆ ಬಕರಾ ಆಗುತ್ತಾರೆ.

ಈಶ್ವರಪ್ಪನವರಿಗೆ ಗ್ರಾಮೀಣಾಭಿವೃದ್ಧಿಯಂತಹ ಮಹತ್ವದ ಸಚಿವ ಖಾತೆ ಸಿಕ್ಕಿದೆ. ಹಿಂದೆ ಎಂ.ಪಿ.ಪ್ರಕಾಶ್, ಅಬ್ದುಲ್ ನಝೀರ್ ಸಾಹೇಬರು ದಕ್ಷತೆಯಿಂದ ಕೆಲಸ ಮಾಡಿ ರಾಷ್ಟ್ರವ್ಯಾಪಿ ಹೆಸರು ಗಳಿಸಿದ್ದರು. ಅದೇ ರೀತಿ ಈಶ್ವರಪ್ಪನವರು ಹೆಸರು ಮಾಡಬಹುದಿತ್ತು. ರಾಜ್ಯದ ಪಂಚಾಯತ್‌ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದರತ್ತ ಗಮನಹರಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಕೇಶವ ಕೃಪಾದ ಗುರುಗಳನ್ನು ಖುಷಿಪಡಿಸಲು ರಾಷ್ಟ್ರಧ್ವಜದ ಬಗ್ಗೆ ಸಂವಿಧಾನದ ಬಗ್ಗೆ ಹಗುರಾಗಿ ಮಾತನಾಡಿದರೆ ನಾಳೆ ಹೀಗೆ ಪ್ರಚೋದಿಸಿದವರೇ ಬೆಂಬಲಕ್ಕೆ ಬರುವುದಿಲ್ಲ. ಬಂಗಾರು ಲಕ್ಷ್ಮಣ್ ಅವರ ಗತಿ ಈಶ್ವರಪ್ಪನವರಿಗೆ ಆಗುತ್ತದೆ ಎಂಬುದನ್ನು ಮರೆಯಬಾರದು.

ಸದನದಲ್ಲಿ ಇಂತಹ ಅಹಿತಕರ ವಾತಾವರಣ ಉಂಟಾದಾಗ ಅದನ್ನು ತಿಳಿಗೊಳಿಸುವುದು ವಿಧಾನ ಸಭಾಧ್ಯಕ್ಷರ ಹೊಣೆಗಾರಿಕೆಯಾಗಿದೆ. ಅದನ್ನು ನಿಭಾಯಿಸುವಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಮರ್ಥರಾಗಲಿಲ್ಲ ಎಂದು ವಿಷಾದದಿಂದ ಹೇಳಬೇಕಾಗುತ್ತದೆ.

ರಾಜ್ಯವನ್ನು ಸುಡುತ್ತಿರುವ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಕೋವಿಡ್ ನಂತರದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಮುಂತಾದ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕಾಗಿದೆ.ಆದರೆ ಇಂತಹ ವಿಷಯಗಳು ಚರ್ಚೆಗೆ ಬರದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಿಜಾಬ್ ನಂತಹ ವಿಷಯಗಳ ಸುತ್ತ ವಿವಾದವನ್ನು ಉಂಟು ಮಾಡುತ್ತವೆ. ಸಚಿವ ಈಶ್ವರಪ್ಪನವರು ಸರಕಾರದ ಹೊಣೆಗಾರಿಕೆಯ ಸ್ಥಾನದಲ್ಲಿದ್ದು ವಿವಾದದ ಕಿಡಿ ಹೊತ್ತಿಸುವ ಮಾತುಗಳನ್ನು ಆಡಬಾರದು. ಈ ವಿಷಯದಲ್ಲಿ ಸರಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಚಾಳಿ ಹೆಚ್ಚಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ವಿಷಯದಲ್ಲಿ ಸಂವಿಧಾನೇತರ ಶಕ್ತಿ ಕೇಂದ್ರದ ಗುರುಗಳ ಮಾತು ಕೇಳದೇ ಕಾನೂನು ಪರಿಣಿತರಿಂದ ಸಲಹೆ ಪಡೆಯಬೇಕು. ಸದ್ಯಕ್ಕೆ ಸದನದ ಕಲಾಪ ಸುಗಮವಾಗಿ ನಡೆಯುವಂತೆ ಅನುಕೂಲವಾಗಲು ಸಚಿವ ಈಶ್ವರಪ್ಪಅವರಿಂದ ರಾಜೀನಾಮೆ ಪಡೆದು ದೇಶದ್ರೋಹದ ಪ್ರಕರಣ ದಾಖಲಿಸಲಿ. ವಿಚಾರಣೆ ಮುಗಿದ ನಂತರ ಈಶ್ವರಪ್ಪನವರು ದೋಷಮುಕ್ತರಾಗಿ ಬಂದರೆ ಈಶ್ವರಪ್ಪನವರನ್ನು ಮತ್ತೆ ಮಂತ್ರಿಯನ್ನಾಗಿ ಮಾಡಲು ಯಾರ ಆಕ್ಷೇಪವೂ ಇಲ್ಲ.
ಈಶ್ವರಪ್ಪಮಾತ್ರವಲ್ಲ ಯಾರೇ ರಾಷ್ಟ್ರಧ್ವಜಕ್ಕೆ ಅಪಚಾರ ಮಾಡಲಿ ಅಂತಹವರ ಮೇಲೆ ಕಾನೂನು ಕ್ರಮ ಅಗತ್ಯವಾಗಿದೆ. ಉದಾಹರಣೆಗೆ ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ.ಟಿ.ರವಿ ಕೂಡ ಇಷ್ಟೆಲ್ಲ ವಿವಾದವಾದ ನಂತರವೂ ರಾಷ್ಟ್ರಧ್ವಜದ ಕೆಳಗೆ ಕೇಸರಿ ಧ್ವಜವೂ ಹಾರಾಡಲಿ ಎಂದಿದ್ದಾರೆ. ಹೀಗೆ ಲಂಗು ಲಗಾಮಿಲ್ಲದೆ ಭಾರತದ ಬಾವುಟದ ಬಗ್ಗೆ ಹಗುರಾಗಿ ಮಾತನಾಡುವವರಿಗೆ ತಕ್ಕ ಶಿಕ್ಷೆಯಾಗಲೇಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X