ಆಪತ್ಬಾಂಧವ ಆಸಿಫ್ ವಿರುದ್ಧ ಜಾಮೀನುರಹಿತ ಮೊಕದ್ದಮೆ

ಸುರತ್ಕಲ್: ಫೆ,19: ಕಳೆದ ಹನ್ನೆರಡು ದಿನಗಳಿಂದ ಎನ್ಐಟಿಕೆ ಟೋಲ್ ಗೇಟ್ ಸ್ಥಗಿತಗೊಳಿಸಬೇಕೆಂದು ಅಹೋರಾತ್ರಿ ಧರಣಿ ಕುಳಿತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ಮೊಕದ್ದಮೆ ದಾಖಲಾಗಿದೆ.
ಫೆ.15ರಂದು ಮಧ್ಯರಾತ್ರಿ ಮಂಗಳಮುಖಿಯರು ಧರಣಿ ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸಿರುವ ಬಗ್ಗೆ ಆಸಿಫ್ ಪೊಲೀಸ್ ದೂರು ನೀಡಿದ್ದರು. ಇದೇ ವಿಚಾರವಾಗಿ ಮಂಗಳಮುಖಿಯರು ಕೂಡಾ ಆಸಿಫ್ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಠಾಣಾ ಪೊಲೀಸರು ಮಂಗಳಮುಖಿಯರು ನೀಡಿದ ದೂರಿನ ಆಧಾರದಲ್ಲಿ ತಮ್ಮ ಮೇಲೆ ಜಾಮೀನು ರಹಿತ ಮೊಕದ್ದಮೆ ದಾಖಲಾಗಿರುತ್ತದೆ ಆದ್ದರಿಂದ ತನಿಖೆಯ ಕುರಿತು ಪೊಲೀಸ್ ಠಾಣೆಗೆ ಹಾಜರಾಗಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
Next Story





