ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಕ್ರಿಮಿನಲ್ ಕೇಸ್ ಗಳನ್ನು ರದ್ದುಪಡಿಸಬಹುದು: ಸುಪ್ರೀಂಕೋರ್ಟ್ ಹೇಳಿಕೆ

ಹೊಸದಿಲ್ಲಿ: ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವ ಅಧಿಕಾರವನ್ನು ಅತ್ಯಂತ ವಿರಳವಾಗಿ ಬಳಸಬೇಕು, ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಮೂರು ವ್ಯಕ್ತಿಗಳ ವಿರುದ್ಧದ ಫೋರ್ಜರಿ ಮತ್ತು ವಂಚನೆ ಪ್ರಕರಣಗಳನ್ನು ಕೈಬಿಡುವ ವೇಳೆ ನ್ಯಾಯಮೂರ್ತಿಗಳಾದ ಜಸ್ಟಿಸ್ ಬಿ ಆರ್ ಗವಾಯಿ ಮತ್ತು ಎಸ್ ರವೀಂದ್ರ ಭಟ್ ಅವರ ಪೀಠ ಮೇಲಿನಂತೆ ಹೇಳಿದೆ.
ವಿರಳದಲ್ಲಿ ಅತ್ಯಂತ ವಿರಳ ಪ್ರಕರಣಗಳಲ್ಲಿ ಪರಿಸ್ಥಿತಿಗಳನ್ನು ಅವಲೋಕಿಸಿ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವ ಅಧಿಕಾರ ಬಳಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕ್ರಿಮಿನಲ್ ಪ್ರಕರಣ ದುರುದ್ದೇಶದಿಮದ ದಾಖಲಾಗಿದ್ದಲ್ಲಿ ಹಾಗೂ ಆರೋಪಿಗಳ ವಿರುದ್ಧದ ದ್ವೇಷದಿಂದ ದಾಖಲಾಗಿದ್ದ ಪಕ್ಷದಲ್ಲಿ ಕ್ರಿಮಿನಲ್ ಕೇಸ್ ಕೈಬಿಡುವ ಅಧಿಕಾರ ಚಲಾಯಿಸಬಹುದಾಗಿದೆ ಎಂದು ಹೇಳಿದ ನ್ಯಾಯಾಲಯ ಈ ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಗೆ ಕಿರುಕುಳ ನೀಡಲೆಂದೇ ದೂರು ದಾಖಲಿಸಲಾಗಿತ್ತು ಎಂದು ಹೇಳಿದೆ.
Next Story





