ಮಂಗಳೂರು: ಕೇಂದ್ರ ಸಚಿವರಿಂದ ವಸತಿ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಂಗಳೂರು, ಫೆ.19: ಕೇಂದ್ರ ಸರ್ಕಾರದ ಉಕ್ಕುಖಾತೆ ಸಚಿವರಾದ ರಾಮ ಚಂದ್ರ ಪ್ರಸಾದ್ ಸಿಂಗ್ ಅವರು ಇಂದು ಕುದುರೆಮುಖ ಅದಿರು ಕಂಪನಿ ವತಿಯಿಂದ ಕಾವೂರಿನ ಕೆ.ಐ.ಓ.ಸಿ.ಎಲ್ನ ವಸತಿ ಸಂಕೀರ್ಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
ಇದೇ ವೇಳೆ ಆವರಣದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟರು. ಕೆ.ಐ.ಓ.ಸಿ.ಎಲ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ ಸಾಮಿನಾಥನ್, ಕೇಂದ್ರ ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ. ಶ್ರೀನಿವಾಸ್ ಸೇರಿದಂತೆ ಸಂಬಂಧಿಸಿದ ಕಂಪನಿಯ ಸಿಬ್ಬಂದಿ ಉಪಸ್ಥಿತರಿದ್ದರು.

Next Story