ವಿಶ್ವಾಸದ ಮನೆಯ ವ್ಯಕ್ತಿ ನಾಪತ್ತೆ

ಉಡುಪಿ, ಫೆ.19: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಗಂಡಸರ ವಾರ್ಡ್ ನಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಫೆ.18ರಂದು ಬೆಳಗಿನ ಜಾವ ನಡೆದಿದೆ.
ನಾಪತ್ತೆಯಾದವರನ್ನು ಶಂಕರಪುರದ ವಿಶ್ವಾಸದ ಮನೆ ಎಂಬ ಮಾನಸಿಕ ಅಸ್ವಸ್ಥರ ಪುನರ್ವಸತಿ ಆಶ್ರಮದ ನಿವಾಸಿ ಪಂಕಜ್ (24) ಎಂದು ಗುರುತಿಸ ಲಾಗಿದೆ. ಫೆ.17ರಂದು ಆಶ್ರಮದಲ್ಲಿರುವ ಏಳು ಮಂದಿಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಅವರಲ್ಲಿ ಪಂಕಜ್ ನನ್ನು ಹೆಚ್ಚಿನ ಚಿಕಿತ್ಸೆ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ಇವರು ಯಾರಿಗೂ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





