'ಕೇಜ್ರಿವಾಲ್‌ಗೆ ಪ್ರತ್ಯೇಕತಾವಾದಿಗಳೊಂದಿಗೆ ನಂಟು' ಆರೋಪಿಸಿದ ಆಪ್ ಮಾಜಿ ಮುಖಂಡನಿಗೆ ವೈ ಕೆಟಗರಿ ಭದ್ರತೆ

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರಿಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಶನಿವಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ndtv.com ವರದಿ ಮಾಡಿದೆ.
ಪಂಜಾಬ್ ಚುನಾವಣೆ ವೇಳೆ ಪ್ರತ್ಯೇಕತಾವಾದಿಗಳೊಂದಿಗೆ ಕೈ ಜೋಡಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯೋಜನೆ ಹಾಕಿಕೊಂಡಿದ್ದರು ಎಂದು ವಿಶ್ವಾಸ್ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಶ್ವಾಸ್ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬೆದರಿಕೆ ಗ್ರಹಿಕೆಯನ್ನು ಪರಿಶೀಲಿಸಿದ್ದು, ಅವರಿಗೆ ವೈ ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮೂಲಕ ವಿಶ್ವಾಸ್ 'ವೈ' ಶ್ರೇಣಿ ಭದ್ರತೆಯನ್ನು ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ. 'ವೈ' ಶ್ರೇಣಿ ಭದ್ರತೆಯ ಅಡಿಯಲ್ಲಿ, ವಿಶ್ವಾಸ್ ಅವರ ರಕ್ಷಣೆಗೆ ನಾಲ್ವರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಇರಲಿದ್ದಾರೆ.
Next Story





