ಉಳ್ಳಾಲ ಉರೂಸ್; ಅನಸ್ ಅಬೂಬಕ್ಕರ್ ಅಶ್ರಫಿ ಉಪನ್ಯಾಸ

ಉಳ್ಳಾಲ: ಪ್ರವಾದಿಗಳ ಮರಣಾನಂತರ, ಇಸ್ಲಾಮಿನ ತತ್ವಾದರ್ಶಗಳನ್ನು ವಿಶ್ವ ವ್ಯಾಪಿ ಮಾಡುವಲ್ಲಿ ಅಹರ್ನಿಶಿ ಶ್ರಮಿಸಿದವರು ಅಲ್ಲಾಹನ ಪ್ರೀತಿ ಪಾತ್ರರಾದವರು ಅವುಲಿಯಾ (ಸಂತರು) ಶಿರೋಮಣಿಗಳಾಗಿದ್ದಾರೆ ಎಂದು ಪ್ರಖಾತ ಇಸ್ಲಾಮಿ ವಿದ್ವಾಂಸ ಅನಸ್ ಅಬೂಬಕ್ಕರ್ ಅಶ್ರಫಿ ಮುಂಬೈ ಹೇಳಿದರು.
ಅವರು ಉಳ್ಳಾಲ ಉರೂಸ್ ಪ್ರಯುಕ್ತ ನಡೆಸಲ್ಪಡುತ್ತಿರುವ ಹತ್ತನೇ ದಿನದ ಮತ ಪ್ರವಚನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶೈಖುನಾ ಸೈಯ್ಯದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ಕೃಷ್ಣಾಪುರ ಹಾಜಿ ಶೈಖುನಾ ಇ.ಕೆ.ಇಬ್ರಾಹಿಂ ಮುಸ್ಲಿಯಾರ್ ದುಆ ನೆರವೇರಿಸಿ ಮಾತನಾಡಿ, ಪ್ರವಾದಿ ಸ.ಅ ಮತ್ತು ಅವರ ಅನುಚರರ ಜೀವನ ನಮಗೆ ಮಾದರಿಯಾಗ ಬೇಕು ಎಂದರು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅನ್ವರ್ ಅಲಿ ದಾರಿಮಿ ಮಾತನಾಡಿ " ವದಂತಿ- ಅಪಪ್ರಚಾರಗಳನ್ನು ನಡೆಸುವುದು ಅಥವಾ ಬಲಿ ಬೀಳುವುದು ಇಸ್ಲಾಮಿನ ಪರಿಧಿಯಿಂದ ಹೊರ ಬೀಳುವ ಅಪಾಯವಿರುವುದರಿಂದ ನಾವು ಸಭ್ಯತೆ ನಡೆ-ನುಡಿಯನ್ನು ನಮ್ಮಲ್ಲಿ ಅಳವಡಿಸಿ ಕೊಳ್ಳೋಣ ಎಂದು ಕರೆ ನೀಡಿದರು.
ಮುಖ್ಯ ಪ್ರಭಾಷಣಗೈದ ಬಶೀರ್ ಮದನಿ ನೀಲಗಿರಿ ಉಸ್ತಾದ್ ರವರು ಗುರುವರ್ಯರ ಆದರ್ಶದ ಬಗ್ಗೆ ಪ್ರಸ್ತಾಪಿಸಿ ತಮ್ಮ ನೆಚ್ಚಿನ ಗುರು ಸೈಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಧ್ಯಾಪಕರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಮರ್ಹೂಂ ಅಬ್ದುಲ್ಲ ಮುಸ್ಲಿಯಾರ್ ತಾಯಕ್ಕೋಡು ರವರೊಂದಿಗಿನ ಒಡನಾಟದ ಕುರಿತು ಹರ್ಷ ವ್ಯಕ್ತ ಪಡಿಸಿ ಗತ ದಿನಗಳನ್ನು ಸ್ಮರಿಸಿ, ನಮ್ಮ ಉಲಮಾಗಳಿಗೆ ಮಾದರಿಯಾಗ ಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಹಾಜಿ ಅಬ್ದುಲ್ ರಶೀದ್ ರವರು, ಉಳ್ಳಾಲ ದರ್ಗಾ ದ ನೇತೃತ್ವ ಮತ್ತು ಉಳ್ಳಾಲದ ಮಹಾ ಜನತೆ, ಗುರು-ಹಿರಿಯರನ್ನು ಆದರಿಸುವ ಪರಂಪರೆಯನ್ನು ಹೊಂದಿದವರಾಗಿದ್ದೇವೆ ಎಂದು ಹೇಳಿ ಪ್ರಚಲಿತ ವಿದ್ಯಾಮಾನಗಳ ಕುರಿತು ಮಾಹಿತಿ ನೀಡಿದರು.
ಸೆಂಟ್ರಲ್ ಕಮಿಟಿಯ ಹಿರಿಯ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಶೈಖುನಾ ಉಸ್ಮಾನ್ ಫೈಝಿ ತೋಡಾರ್, ಹಾಜಿ ಹನೀಫ್ ಸೆಂಟ್ರಲ್ ಕಮಿಟಿ, ಡಾ. ಯು.ಟಿ.ಇಫ್ತಿಕರ್ ಅಲಿ, ಅಬ್ದುಲ್ಲ ಮುಸ್ಲಿಯಾರ್ ಬದ್ರಿಯಾ ಮಸ್ಜಿದ್ ಮಂಗಳೂರು, ಹೊಸಪಳ್ಳಿ. ಇಮಾಮ್ ಮುಹಮ್ಮದ್ ಅಲಿ ಮದನಿ, ಅಬ್ದುಲ್ ಲತೀಫ್ ಮದನಿ ಅಕ್ಕರೆಕರೆ ಇಮಾಮ್. ಅಬ್ದುಲ್ ಲತೀಫ್ ಮದನಿ ಅಕ್ಕರೆಕರೆ ಇಮಾಮ್. ಉದ್ಯಮಿ ಅದ್ದು ಹಾಜಿ, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಯು.ಟಿ.ಇಲ್ಯಾಸ್, ಇಬ್ರಾಹಿಂ ಮದನಿ, ಅಮೀರ್ ಹಾಜಿ, ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲ, ಹಾಫಿಳ್ ಅಬುಸುಫಿಯಾನ್ ಸಖಾಫಿ, ಮುಸ್ತಫ ಅಝ್ಹರಿ, ಹುಸೈನ್ ಸುಖಾಫಿ, ಯೂಸುಫ್ ಮದನಿ, ಅಶ್ರಫ್ ಮುಕ್ಕಚೇರಿ, ಅಬೂಬಕ್ಕರ್, ಉವೈಸ್ ಮದನಿ ತೋಕೆ, ಯೂನುಸ್ ಮದನಿ ಪಾಂಡವರಕಲ್ಲು ಮುಂತಾದವರು ವೇದಿಕೆಯಲ್ಲಿದ್ದರು. ಸಲಾಂ ಮದನಿ ಅಳಕೆ ಕಾರ್ಯಕ್ರಮ ನಿರೂಪಣೆಗೈದರು.







