ಕಲ್ಲಡ್ಕ ಪ್ರೀಮಿಯರ್ ಲೀಗ್ ಸೀಸನ್ 7; ಕ್ರಿಕೆಟ್ ಪಂದ್ಯಾಟದ ಟ್ರೋಫಿ, ಜರ್ಸಿ ಬಿಡುಗಡೆ

ವಿಟ್ಲ : ಸೌಹಾರ್ದ ಫ್ರೆಂಡ್ಸ್ ಕಲ್ಲಡ್ಕ ಇದರ ಆಶ್ರಯದಲ್ಲಿ ಪೆ. 20 ರಂದು ಕಲ್ಲಡ್ಕದಲ್ಲಿ ನಡೆಯಲಿರುವ ಕಲ್ಲಡ್ಕ ಪ್ರೀಮಿಯರ್ ಲೀಗ್ ಸೀಸನ್ 7 (ಕೆಪಿಎಲ್ 2022) ಕ್ರಿಕೆಟ್ ಪಂದ್ಯಾಟ ದ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಸಮಾರಂಭವು ಪಾಣೆಮಂಗಳೂರು ಆಲಡ್ಕದ ಎಸ್.ಎಸ್ ಹಾಲ್ ನಲ್ಲಿ ನಡೆಯಿತು.
ಟ್ರೋಫಿ ಹಾಗೂ ಜರ್ಸಿ ಬಿಡುಗಡೆಗೊಳಿಸಿದ ಕಲ್ಲಡ್ಕ ಕೆ.ಟಿ. ಹೋಟೇಲ್ ಮಾಲಕ ರಾಜೇಂದ್ರ ಹೊಳ್ಳ ಮಾತನಾಡಿ ಕ್ರೀಡಾಕೂಟಗಳು ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಪೂರಕವಾಗಿದ್ದು ಇಂತಹ ಕ್ರೀಡಾಕೂಟಗಳು ಪ್ರತೀ ಗ್ರಾಮ ಗಳಲ್ಲಿಯೂ ನಡೆಯುಂತಾಗಲಿ ಎಂದರು.
ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಯ ಪಾಲುದಾರ ಹಾಜಿ ಅಹ್ಮದ್ ಮುಸ್ತಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಇಮ್ತಿಯಾಝ್ ಗೋಳ್ತಮಜಲು, ಖಾಸಿಂ ಕಲ್ಲಡ್ಕ, ಅಜ್ಮಲ್ ಆಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲ್ಲಡ್ಕ ಪ್ರೀಮಿಯರ್ ಲೀಗ್ ಸೀಸನ್ 7 (ಕೆಪಿಎಲ್ 2022) ಕ್ರಿಕೆಟ್ ತಂಡಗಳ ಮಾಲಕರುಗಳಾದ ಜಿ.ಎಸ್. ಸಿದ್ದೀಕ್ ಮುರಬೈಲು ಟೈಗರ್ಸ್, ಸಂಶುದ್ದೀನ್ ಸನ್ ಲೈಟ್ ಸನ್ ರೈಸ್ ಕೆ.ಸಿ.ರೋಡ್, ಜಾವಿದ್ ಕೆ.ಎಸ್.ಎ ಜಝಾ ಸ್ಪೋರ್ಟ್ಸ್, ಮುನಾಝ್ ಮೋನ್ಝಾ ಇಲೆವನ್, ಜಲೀಲ್ ಕೆ.ಸಿ.ರೋಡ್ ವಾರಿಯರ್ಸ್, ಡಿ.ಜೆ. ಅಶ್ರಫ್ ಎಂ.ಎಸ್.ಸುಲ್ತಾನ್, ಜಾಫರ್ ಮೈದಾನ್ ಬುಲ್ಸ್ ಹಾಗೂ ತೌಫೀಕ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಡ್ಕ ಸೌಹಾರ್ದ ಫ್ರೆಂಡ್ಸ್ ಅಧ್ಯಕ್ಷ ಮನ್ಸೂರ್ ಸೂರಜ್ ಸ್ವಾಗತಿಸಿ, ಕಾರ್ಯದರ್ಶಿ ನಝೀರ್ ಬಲ್ಲೆಕೋಡಿ ವಂದಿಸಿದರು. ಸಫ್ವಾನ್ ಷಾ ಬಹರೈನ್ ನಿರೂಪಿಸಿದರು.



















