ಟೆಸ್ಟ್ ತಂಡದಿಂದ ವೃದ್ಧಿಮಾನ್‌ಗೆ ಗೇಟ್‌ಪಾಸ್; ಪತ್ರಕರ್ತನ ವಿರುದ್ಧ ಕ್ರಿಕೆಟಿಗನ ಆಕ್ರೋಶ; ಕಾರಣವೇನು ಗೊತ್ತೇ?

ಹೊಸದಿಲ್ಲಿ: ಬಿಸಿಸಿಐ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಈ ಬಾರಿಯ ಟೆಸ್ಟ್ ತಂಡದಿಂದ ನಾಲ್ಕು ಹಿರಿಯ ಆಟಗಾರರನ್ನು ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ಇಶಾಂತ್ ಶರ್ಮಾ ಮತ್ತು ವೃದ್ದಿಮಾನ್ ಸಾಹ ಅವರನ್ನು ಶ್ರೀ ಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ. ಈಗಾಗಲೇ ತಂಡದಿಂದ ಕೈಬಿಟ್ಟಿರುವ ನೋವಿನಲ್ಲಿ ಇರುವ ವೃದ್ಧಿಮಾನ್‌ಗೆ ಪತ್ರಕರ್ತನೊಬ್ಬ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡಿರುವುದಾಗಿ ವರದಿ ಆಗಿದೆ.
ಪತ್ರಕರ್ತ ಕಳಿಸಿದ ಮೆಸೇಜ್‌ಗಳ ಸ್ಕ್ರೀನ್ ಶಾಟನ್ನು ಸ್ವತಃ ವೃದ್ಧಿಮಾನ್ ಅವರೇ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ತನಗೆ ಸಂದರ್ಶನ ನೀಡುವಂತೆ ಒತ್ತಾಯಿಸಿ ಓರ್ವ ಪತ್ರಕರ್ತ ಕಳುಹಿಸಿದ ಸಂದೇಶಗಳನ್ನು ವೃದ್ಧಿಮಾನ್ ಹಂಚಿಕೊಂಡಿದ್ದಾರೆ.
ʼಭಾರತ ತಂಡಕ್ಕೆ ನಾನೆಲ್ಲಾ ನನ್ನ ಕೊಡುಗೆಗಳನ್ನು ನೀಡಿದ ಬಳಿಕ ʼಗೌರವಾನ್ವಿತʼ ಪತ್ರಕರ್ತರಿಂದ ಪಡೆಯುವುದು ನಾನು ಇದನ್ನೇ.. ಪತ್ರಿಕೋದ್ಯಮ ಇಲ್ಲಿಗೆ ಬಂದು ತಲುಪಿದೆʼ ಎಂದು ವೃದ್ಧಿಮಾನ್ ಟ್ವೀಟ್ ಮಾಡಿದ್ದಾರೆ.
ನಿವೃತ್ತಿ ಪಡೆಯುವಂತೆ ದ್ರಾವಿಡ್ ಸಲಹೆ
ಈ ನಡುವೆ, ತನ್ನನ್ನು ತಂಡದಿಂದ ಹೊರಗಿಟ್ಟಿರುವ ಹಿಂದಿನ ಗುಟ್ಟನ್ನು ವಿಕೆಟ್ ಕೀಪರ್ ವೃಧ್ಧಿಮಾನ್ ಸಾಹ ಅವರು ಬಿಚ್ಚಿಟ್ಟಿದ್ದಾರೆ. ತನ್ನನ್ನು ಭಾರತ ತಂಡದಿಂದ ಕ ಬಿಡುವುದಾಗಿ ತನಗೆ ಮೊದಲೇ ತಿಳಿದಿತ್ತು ಎಂದು ಅವರು ತಿಳಿಸಿದ್ದಾರೆ. ರಾಹುಲ್ ದ್ರಾವಿಡ್ ಅವರು ನನ್ನ ಬಳಿ ನೀನು ನಿವೃತ್ತಿ ಬಗ್ಗೆ ಯೋಚಿಸು ಎಂದು ಮೊದಲೇ ತಿಳಿಸಿದ್ದರು ಎಂದು ವೃದ್ಧಿಮಾನ್ ಬಹಿರಂಗ ಪಡಿಸಿದ್ದಾರೆ.
“ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನ ಆಯ್ಕೆ ಸಮಿತಿ ನನ್ನನ್ನು ಮುಂದಿನ ಸರಣಿಗೆ ಆಯ್ಕೆ ಮಾಡುವುದಿಲ್ಲ ಎಂದು ಮೊದಲೇ ಹೇಳಿದ್ದರು. ಆಯ್ಕೆ ಸಮಿತಿಯ ಕೆಲವು ಸದಸ್ಯರು ನನಗೆ ಬದಲಾಗಿ ಹೊಸ ಕೀಪರನ್ನು ತರುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದಿದ್ದರು. ಆದರೆ, ತಂಡದ ಪಟ್ಟಿ ಪ್ರಕಟವಾಗುವ ಮೊದಲು ಈ ಬಗ್ಗೆ ನಾನು ಎಲ್ಲಿಯೂ ಮಾತನಾಡುವಂತಿರಲಿಲ್ಲ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೂಡ ನಿವೃತ್ತಿ ತೆಗೆದುಕೊಳ್ಳುವಂತೆ ನನಗೆ ಸಲಹೆ ನೀಡಿದ್ದರು” ಎಂದು ವೃದ್ಧಿಮಾನ್ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
After all of my contributions to Indian cricket..this is what I face from a so called “Respected” journalist! This is where the journalism has gone. pic.twitter.com/woVyq1sOZX
— Wriddhiman Saha (@Wriddhipops) February 19, 2022