ಉಡುಪಿ: ರವಿವಾರ 23 ಮಂದಿ ಕೋವಿಡ್ ಪಾಸಿಟಿವ್
ಸಾಂದರ್ಭಿಕ ಚಿತ್ರ (PTI)
ಉಡುಪಿ, ಫೆ.20: ಜಿಲ್ಲೆಯಲ್ಲಿ ರವಿವಾರ 23 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 58 ಮಂದಿ ಸೋಂಕಿನಿಂದ ಚೇತರಿಸಿ ಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 196ಕ್ಕಿಳಿದಿದೆ.
ಇಂದು ಪಾಸಿಟಿವ್ ಬಂದ 23 ಮಂದಿಯಲ್ಲಿ 10 ಮಂದಿ ಪುರುಷರು ಹಾಗೂ 13 ಮಂದಿ ಮಹಿಳೆಯರು. ಇವರಲ್ಲಿ 13 ಮಂದಿ ಉಡುಪಿ ತಾಲೂಕಿಗೆ, ಐವರು ಕುಂದಾಪುರ, ನಾಲ್ವರು ಕಾರ್ಕಳ ತಾಲೂಕಿಗೆ ಹಾಗೂ ಒಬ್ಬರು ಹೊರಜಿಲ್ಲೆಗೆ ಸೇರಿದವರು. ಪಾಸಿಟಿವ್ ಬಂದವರಲ್ಲಿ 22 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ 58 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18196ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1409 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,297ಕ್ಕೇರಿದೆ.
ಜಿಲ್ಲೆಯಲ್ಲಿ ಇಂದು ನಾಲ್ವರು ಮಾತ್ರ ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇಬ್ಬರು ಹಿರಿಯ ನಾಗರಿಕರು ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದರೆ ಇಬ್ಬರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.