ಗ್ರೀಸ್ ಬಳಿ ಹಡಗಿಗೆ ಬೆಂಕಿ: 280 ಜನರ ರಕ್ಷಣೆ

ಗ್ರೀಸ್
ಅಥೆನ್ಸ್, ಫೆ.20: ಗ್ರೀಸ್ನಿಂದ ಇಟಲಿಗೆ ಸಂಚರಿಸುತ್ತಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಡಗಿನಲ್ಲಿದ್ದ ಸಿಬಂದಿ ಹಾಗೂ ಪ್ರಯಾಣಿಕರ ಸಹಿತ 292 ಜನರಲ್ಲಿ 280 ಜನರನ್ನು ರಕ್ಷಿಸಲಾಗಿದೆ ಎಂದು ಗ್ರೀಸ್ ದೇಶದ ಹಡಗು ಮತ್ತು ನೌಕಾಯಾನ ಸಚಿವಾಲಯದ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ನಾಪತ್ತೆಯಾಗಿದ್ದ 12 ಜನರಲ್ಲಿ ಓರ್ವನನ್ನು ಕೆಲ ಗಂಟೆಗಳ ಬಳಿಕ ಪತ್ತೆಹಚ್ಚಿ ರಕ್ಷಿಸಲಾಗಿದೆ. ಉಳಿದ 11 ಮಂದಿಯ ಪತ್ತೆಯಿಲ್ಲ ಎಂದು ಇಲಾಖೆ ಹೇಳಿದೆ. ಇಟಲಿಯ ಧ್ವಜ ಹೊಂದಿದ್ದ ಒಲಿಂಪಿಯಾ ಹಡಗು ಗ್ರೀಸ್ನ ಇಗೌಮೆಂಟಿಸ್ಟಾ ಬಂದರಿನಿಂದ ಇಟಲಿಯ ಬ್ರಿಂಡಿಸಿ ಬಂದರಿಗೆ ಪ್ರಯಾಣ ಬೆಳೆಸಿತ್ತು. ಸಮುದ್ರ ಮಧ್ಯದಲ್ಲಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿ ಸಿಬ್ಬಂದಿ ಸಹಿತ 292 ಜನರಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





