ಮಂಗಳೂರು: ಜನತೆಯಲ್ಲಿ ಧೈರ್ಯ ತುಂಬಲು ಮಂಗಳೂರು ನಗರ ಪೊಲೀಸರಿಂದ ಪಥ ಸಂಚಲನ

ಮಂಗಳೂರು: ಹಿಜಾಬ್ ಕೇಸರಿ ಶಾಲು ವಿವಾದ, ಶಿವಮೊಗ್ಗದಲ್ಲಿ ನಡೆದ ಕೊಲೆಪ್ರಕರಣ ಹಿನ್ನೆಲೆಯಲ್ಲಿ ನಗರದ ಜನತೆಯಲ್ಲಿ ಧೈರ್ಯ ತುಂಬುವ ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಯನ್ನು ಖಾತರಿ ಪಡಿಸುವ ಉದ್ದೇಶದಿಂದ ನಗರದ ಪೊಲೀಸರು ಪಥ ಸಂಚಲನ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಪಥ ಸಂಚಲನಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿ ನಟರಾಜ್ ನೇತೃತ್ವ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಪಥ ಸಂಚಲನ ಪೊಲೀಸ್ ಆಯುಕ್ತರ ಕಚೇರಿ ಬಳಿ ಕೊನೆಗೊಂಡಿತು.