ನಿಷೇಧಾಜ್ಞೆ ಇದ್ದರೂ ಎರಡು ಬಾರಿ ಶವ ಯಾತ್ರೆ!
ಈಶ್ವರಪ್ಪ, ರಾಘವೇಂದ್ರ ನೇತೃತ್ವ

ಬೆಂಗಳೂರು, ಫೆ. 21 : ಹರ್ಷ ಕೊಲೆಯಾದ ಬೆನ್ನಿಗೇ ರವಿವಾರ ರಾತ್ರಿಯೇ ಫೆ. 23 ರ ರಾತ್ರಿವರೆಗೆ ಅನ್ವಯವಾಗುವಂತೆ ಶಿಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಜೊತೆಗೆ ಸೋಮವಾರ, ಮಂಗಳವಾರ ಶಾಲಾ ಕಾಲೇಜುಗಳಿಗೂ ರಜೆ ಸಾರಲಾಗಿತ್ತು. ಆದರೂ ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷ ಮನೆಯಿರುವ ಸೀಗೆ ಹಟ್ಟಿಗೆ ಮಧ್ಯಾಹ್ನ ಸೀಗೆ ಹಟ್ಟಿಯಿಂದ ಅಂತಿಮ ಸಂಸ್ಕಾರ ನಡೆಯುವ ರೋಟರಿ ಚಿತಾಗಾರಕ್ಕೆ ಶವಯಾತ್ರೆ ನಡೆಸಲು ಅವಕಾಶ ನೀಡಲಾಯಿತು. ಇದೇ ಹಿಂಸಾಚಾರಕ್ಕೆ ಕಾರಣವಾಯಿತು ಎನ್ನಲಾಗಿದೆ.
ಇನ್ನು ಅಂತಿಮ ಸಂಸ್ಕಾರಕ್ಕೆ ಹೊರಟ ಶವ ಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರೇ ನೇತೃತ್ವ ವಹಿಸಿಕೊಂಡಿದ್ದರು.
ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಿಂದ ಹೊರಟ ಶವಯಾತ್ರೆ ಬಿ ಎಚ್ ರಸ್ತೆ, ಓಟಿ ರಸ್ತೆ ಮಾರ್ಗವಾಗಿ ಸುಮಾರು 2 ಕಿಮೀ ಕ್ರಮಿಸಿ ಹರ್ಷ ಮನೆಯಿರುವ ಸೀಗೆ ಹಟ್ಟಿಗೆ ಬಂತು. ಬಳಿಕ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಸೀಗೆ ಹಟ್ಟಿಯಿಂದ ಹೊರಟ ಅಂತಿಮ ಯಾತ್ರೆ ಗಾಂಧಿ ಬಝಾರ್,ಶಿವಪ್ಪ ನಾಯಕ ಸರ್ಕಲ್, ಬಿಎಚ್ ರಸ್ತೆ, ಹೊಳೆ ಬಸ್ ಸ್ಟಾಂಡ್ ಮಾರ್ಗವಾಗಿ ಸುಮಾರು 5 ಕಿಮೀ ಕ್ರಮಿಸಿ ರೋಟರಿ ಚಿತಾಗಾರ ತಲುಪಿತು. ಈ ಎರಡೂ ಮೆರವಣಿಗೆಗಳಲ್ಲಿ ನೂರಾರು ಸಂಘ ಪರಿವಾರದ ಕಾರ್ಯಕರ್ತರು ಬೈಕ್ ಮತ್ತಿತರ ವಾಹನಗಳಲ್ಲಿ ಕೇಸರಿ ಧ್ವಜ ಹಿಡಿದುಕೊಂಡು ಜೈ ಶ್ರೀರಾಮ್ ಮತ್ತಿತರ ಘೋಷಣೆ ಕೂಗಿಕೊಂಡು ಸಾಗಿದರು. ಮಾರ್ಗದಲ್ಲಿ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದವು.






.jpg)

