'ನಮ್ಮದೇ ಸರ್ಕಾರ ಇದ್ದರೂ ಈ ರೀತಿ ಆಗ್ತಿದೆ ಎಂಬುದಕ್ಕೆ ನಾಚಿಕೆ ಆಗ್ತಿದೆ': ಸಂಸದ ಪ್ರತಾಪ್ ಸಿಂಹ

ಬೆಂಗಳೂರು: 'ನಮ್ಮದೇ ಸರ್ಕಾರ ಇದ್ದರೂ ಈ ರೀತಿ ಆಗ್ತಿದೆ ಎಂಬುದಕ್ಕೆ ನಾಚಿಕೆ ಆಗ್ತಿದೆ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗಲೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರನ್ನು ನಿಂದಿಸುತ್ತಿದ್ದೆವು. ಈಗ ನಮ್ಮ ಸರ್ಕಾರ ಇದ್ದರೂ ನಮ್ಮದೇ ಕಾರ್ಯಕರ್ತ ಹತ್ಯೆ ಆಗಿದ್ದಾನೆ. ಇದು ನನಗೆ ತೀವ್ರ ನೋವುಂಟು ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ನಮ್ಮ ಹಿಂದೂ ಕಾರ್ಯಕರ್ತ ಹತ್ಯೆಯಾಗಿದ್ದಾನೆ ಸರ್ಕಾರ ಇನ್ನು ಯಾವಾಗ ಕ್ರಮ ಕೈಗೊಳ್ಳಲಿದೆ? ಎಂದ ಪ್ರಶ್ನಿಸಿದ ಅವರು, ಈ ಪತ್ರಿಕಾ ಹೇಳಿಕೆ ಮಾತಿನಿಂದ ಏನೂ ಆಗಲ್ಲ, ಈ ರೀತಿಯ ಘಟನೆಗಳಿಂದ ನಮ್ಮ ಕಾರ್ಯಕರ್ತರು ಭಮನಿರಸನಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರಲ್ಲಿ ನಾನು ಮನವಿ ಮಾಡುವುದೇನೆಂದರೆ ಇನ್ನಾದರೂ ಮಾತು ನಿಲ್ಲಿಸಿ ಕೃತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.