Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು...

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಭಾವೈಕ್ಯಕ್ಕೆ ಬೆಂಕಿ

ವಾರ್ತಾಭಾರತಿವಾರ್ತಾಭಾರತಿ22 Feb 2022 12:05 AM IST
share
ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಭಾವೈಕ್ಯಕ್ಕೆ ಬೆಂಕಿ

ಒಕ್ಕೂಟ ಸರಕಾರದ ಮತ್ತು ಕರ್ನಾಟಕದ ಅಧಿಕಾರ ಸೂತ್ರ ಹಿಡಿದಿರುವ ಭಾರತೀಯ ಜನತಾ ಪಕ್ಷ ಆಡಳಿತ ನಿರ್ವಹಣೆಯಲ್ಲಿ ಎರಡೂ ಕಡೆ ವಿಫಲಗೊಂಡಿದೆ. ಹೇಳಿಕೊಳ್ಳುವ ಯಾವ ಸಾಧನೆಗಳನ್ನೂ ಈ ಸರಕಾರಗಳು ಮಾಡಿಲ್ಲ. ಅಭಿವೃದ್ಧಿ ಸಾಧನೆಗಳನ್ನು ಮಾಡುವುದು ಒತ್ತಟ್ಟಿಗೆ ಇರಲಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ವಾತಾವರಣ ಕೂಡ ಇಲ್ಲ. ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ, ಮಿತಿ ಮೀರಿದ ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ, ಹೀಗೆ ನೂರೆಂಟು ಸಮಸ್ಯೆಗಳ ಸಂಕಟದ ಸುಳಿಗೆ ಭಾರತವನ್ನು ಸಿಲುಕಿಸಿದ ಬಿಜೆಪಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬರುವ ಸ್ಥಿತಿಯಲ್ಲಿ ಇಲ್ಲ. ಮತದಾರರ ಬಳಿ ಹೋಗಲು ಮುಖವಿಲ್ಲ. ಹಾಗಾಗಿಯೇ ವಿಭಿನ್ನ ಜನ ಸಮುದಾಯಗಳ ಸೌಹಾರ್ದದ ಬದುಕಿಗೆ ಕೊಳ್ಳಿ ಇಡಲು ಹೊರಟಿದೆ.

ಈ ಹುಳಿ ಹಿಂಡುವ ಕೆಲಸಕ್ಕೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಅವರ ಚುನಾವಣಾ ಭಾಷಣಗಳ ವೈಖರಿಯನ್ನು ಗಮನಿಸಿದರೆ ಅವರು ತಲುಪಿರುವ ಹತಾಶ ಸ್ಥಿತಿ ಗೊತ್ತಾಗುತ್ತದೆ. ಚುನಾವಣಾ ಪ್ರಚಾರದಲ್ಲಿ ಸರಕಾರದ ಸಾಧನೆಗಳನ್ನು ಕುರಿತು ಮಾತಾಡದೆ ಭಾರತ-ಪಾಕಿಸ್ತಾನ ವಿಷಯವನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳು ಪಾಕಿಸ್ತಾನದ ಪರವಾಗಿವೆ ಎಂದು ಮೋದಿ ಮತ್ತು ಯೋಗಿ ಹೇಳುತ್ತಿದ್ದಾರೆ. ಭಯೋತ್ಪಾದಕರ ಬಗ್ಗೆ ಸಮಾಜವಾದಿ ಪಕ್ಷ ಸಹಾನುಭೂತಿ ಹೊಂದಿದೆ ಎಂಬ ಅವರ ಮಾತುಗಳನ್ನು ಕೇಳಿ ಅಲ್ಲಿನ ಜನ ನಗುತ್ತಿದ್ದಾರೆ.

ಇಲ್ಲಿ ಕರ್ನಾಟಕದಲ್ಲಿ ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಆಡಳಿತ ವೈಫಲ್ಯಗಳ ಮೇಲೆ ತಿಪ್ಪೆಸಾರಿಸಲು ದೇವಾಲಯಗಳನ್ನ್ನು, ಶಾಲಾ ಆವರಣಗಳನ್ನು, ವಿಶ್ವವಿದ್ಯಾನಿಲಯಗಳನ್ನು ನಿರ್ಲಜ್ಜವಾಗಿ ಬಳಸಿಕೊಳ್ಳುತ್ತಿದೆ. ಶಾಲೆಗಳಲ್ಲಿ ಒಂದೇ ಬೆಂಚ್‌ನಲ್ಲಿ ಅಕ್ಕಪಕ್ಕ ಕುಳಿತು ವ್ಯಾಸಂಗ ಮಾಡುತ್ತಿದ್ದ ಎಳೆ ಮಕ್ಕಳ ನಡುವೆ ದ್ವೇಷದ ದಳ್ಳುರಿ ಎಬ್ಬಿಸಲು ಮುಂದಾಗಿದೆ. ಕೋವಿಡ್‌ನಿಂದ ದಿವಾಳಿಯ ಅಂಚಿಗೆ ಬಂದಿದ್ದ ಆರ್ಥಿಕತೆ ಹಳಿಗೆ ಬಂದಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಚಿಂತಾಜನಕವಾಗಿದೆ. ಸಾಲದ ಭಾರ ಹೆಚ್ಚಾಗಿದೆ. ಕೋವಿಡನ್ನು ಯಶಸ್ವಿಯಾಗಿ ನಿಭಾಯಿಸಿದ್ದಾಗಿ ರಾಜ್ಯಪಾಲರ ಬಾಯಿಯಿಂದ ಸುಳ್ಳು ಹೇಳಿಸಿದ ಸರಕಾರ ಆಮ್ಲಜನಕದ ಅಭಾವದಿಂದ ಚಾಮರಾಜನಗರ ಮುಂತಾದ ಕಡೆ ಸಂಭವಿಸಿದ ಅನೇಕ ಸಾವುಗಳನ್ನು ಮುಚ್ಚಿ ಹಾಕಲು ಹರ ಸಾಹಸ ಮಾಡುತ್ತಿದೆ. ಇಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡುತ್ತಿಲ್ಲ. ಅವರ ಬದಲಾಗಿ ಪ್ರಚೋದನಕಾರಿ ಮಾತುಗಳನ್ನು ಆಡಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ನವರನ್ನು ಮುಂದೆ ಬಿಡಲಾಗಿದೆ. ರಾಷ್ಟ್ರ ಧ್ವಜದ ಬಗ್ಗೆ ಅಗೌರವದ ಮಾತನ್ನಾಡಿ ಸದನದಲ್ಲಿ ಕೋಲಾಹಲ ಉಂಟಾಗಲು ಕಾರಣರಾದ ಈಶ್ವರಪ್ಪಇದೀಗ ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಮುಸ್ಲಿಮ್ ಗೂಂಡಾಗಳು ಕಾರಣ ಎಂದು ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಈಶ್ವರಪ್ಪನವರು ರಾಜ್ಯದ ಹಿರಿಯ ರಾಜಕಾರಣಿ. ಸದನದ ಹಿರಿಯ ಸದಸ್ಯರು, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಅವರು ಕೊಂಚ ಘನತೆಯಿಂದ ವರ್ತಿಸಿದ್ದರೆ, ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದರೆ ಸದನದ ಕಲಾಪ ಹಳ್ಳ ಹಿಡಿಯುತ್ತಿರಲಿಲ್ಲ. ಈ ಬಾರಿ ಅನೇಕ ಹೊಸ ಯುವಕರು ಶಾಸಕರಾಗಿ ಸದನಕ್ಕೆ ಬಂದಿದ್ದಾರೆ. ಅವರಿಗೆ ಮಾದರಿಯಾಗುವಂತೆ ಹಿರಿಯ ಸದಸ್ಯರು ಮತ್ತು ಸಚಿವರು ವರ್ತಿಸಬೇಕು. ಸದನದಲ್ಲಿ ಚರ್ಚೆಯಾಗಬೇಕಿದ್ದ ಅನೇಕ ಮಹತ್ವದ ವಿಷಯಗಳಿದ್ದವು. ಅವುಗಳೆಲ್ಲ ಕಡೆಗಣಿಸಲ್ಪಟ್ಟಿವೆ. ಇದಕ್ಕೆ ಆಡಳಿತ ಪಕ್ಷದ ಅತಿರೇಕದ ವರ್ತನೆಯೂ ಕಾರಣ. ಪ್ರತಿಪಕ್ಷಗಳೂ ಸದನದ ಕಲಾಪ ಹಳಿಗೆ ಬರಲು ಸಹಕರಿಸಬೇಕು. ಆದರೆ ಅಂತಹ ವಾತಾವರಣ ಕಲ್ಪಿಸುವ ಜವಾಬ್ದಾರಿ ಆಡಳಿತ ಪಕ್ಷದ ಮೇಲಿದೆ.
ಎಪ್ಪತ್ತರ ದಶಕದ ವರೆಗೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ವರ್ಷಕ್ಕೆ ಕನಿಷ್ಠ ಮೂರು ತಿಂಗಳಾದರೂ ನಡೆಯುತ್ತಿತ್ತು. ಸದನದಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯುತ್ತಿದ್ದವು. ಆದರೆ ವಿಷಾದದ ಸಂಗತಿಯೆಂದರೆ ಈಗ ಸದನದ ಕಲಾಪಗಳು ಒಂದು ತಿಂಗಳೂ ಸರಿಯಾಗಿ ನಡೆಯುವುದಿಲ್ಲ. ಇದು ತಮ್ಮನ್ನು ಚುನಾಯಿಸಿದ ಮತದಾರರಿಗೆ ದ್ರೋಹ ಬಗೆದಂತೆ.

ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಭಾರತೀಯ ಜನತಾ ಪಕ್ಷ ಮುಂದಿನ ಚುನಾವಣೆಯ ಗುಂಗಿನಲ್ಲಿ ಇದ್ದಂತೆ ಕಾಣುತ್ತದೆ. ಅದಕ್ಕಾಗಿ ಕೋಮು ಧ್ರುವೀಕರಣ ಅದರ ಸದ್ಯದ ಕಾರ್ಯತಂತ್ರವಾಗಿದೆ. ಸಮುದಾಯಗಳ ನಡುವೆ ವೈಷಮ್ಯ ಮೂಡಿಸುವ ಯಾವ ಅವಕಾಶವನ್ನೂ ಕೋಮುವಾದಿ ಶಕ್ತಿಗಳು ಕಳೆದುಕೊಳ್ಳುವುದಿಲ್ಲ. ಇದು ಸಂವಿಧಾನವನ್ನು ಒಪ್ಪಿಕೊಂಡು ಚುನಾವಣೆಗೆ ಸ್ಪರ್ಧಿಸುವ ಯಾವುದೇ ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ. ಅಧಿಕಾರದಲ್ಲಿರುವವರ ಬಾಯಿಯಲ್ಲಿ ಉರಿಯುವ ಬೆಂಕಿಯನ್ನು ಆರಿಸುವ ಸೌಹಾರ್ದದ, ಸಾಮರಸ್ಯದ ಮಾತುಗಳು ಬರಬೇಕು. ಸಮಾಜವನ್ನು, ಮನಸ್ಸುಗಳನ್ನು ಒಡೆದು ದೇಶ ಕಟ್ಟಲು ಆಗುವುದಿಲ್ಲ ಎಂಬ ವಿವೇಕ ರಾಜಕಾರಣಿಗಳಲ್ಲಿ ಮೂಡಬೇಕು.

ಚುನಾವಣೆಗಳು ಬರುತ್ತವೆ, ಹೋಗುತ್ತವೆ, ಆದರೆ ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಶಾಂತಿಯನ್ನು ಕದಡಿದರೆ, ಮನಸ್ಸುಗಳು ಒಡೆದರೆ ಅದು ಮತ್ತೆ ಸರಿ ದಾರಿಗೆ ಬರುವುದು ಅಷ್ಟು ಸುಲಭವಲ್ಲ. ರಾಜಕಾರಣಿಗಳು ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುವ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಒಮ್ಮೆ ಅಶಾಂತಿಯ ಪರಿಸ್ಥಿತಿ ನಿರ್ಮಾಣವಾದರೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಮೂಲೆ ಗುಂಪಾಗುತ್ತವೆ. ಯಾವುದೇ ಕೆಲಸ ಮಾಡದೆ ಜನಸಾಮಾನ್ಯರನ್ನು ಜಾತಿ-ಮತದ ಹೆಸರಿನಲ್ಲಿ ವಿಭಜಿಸಿ ಚುನಾವಣೆಯಲ್ಲಿ ಗೆಲ್ಲುವ ಸುಲಭದ ಮಾರ್ಗಕ್ಕೆ ರಾಜಕಾರಣಿಗಳು ಕೈ ಹಾಕುತ್ತಾರೆ. ಇವರ ಚುನಾವಣಾ ರಾಜ ಕಾರಣಕ್ಕೆ ಭಾರತದ ಏಕತೆ, ಸಮಗ್ರತೆಗಳು ಬಲಿಯಾಗುತ್ತವೆ ಎಂಬುದನ್ನು ಮರೆಯಬಾರದು.

ಇಂದಿನ ಉದ್ರೇಕದ ವಾತಾವರಣಕ್ಕೆ ರಾಜಕಾರಣಿಗಳನ್ನು ಮಾತ್ರ ದೂರಿದರೆ ಪ್ರಯೋಜನವಿಲ್ಲ. ಇದಕ್ಕೆ ಕೆಲ ವಿದ್ಯುನ್ಮಾನ ಮಾಧ್ಯಮಗಳ ಪ್ರಚೋದನಕಾರಿ ಸುದ್ದಿ ಪ್ರಸಾರವೂ ಕಾರಣ. ಮಾಧ್ಯಮಗಳು ಸ್ವಯಂ ಕಡಿವಾಣ ಹಾಕಿಕೊಳ್ಳಬೇಕಾಗಿದೆ.

ಶಿವಮೊಗ್ಗದಲ್ಲಿ ನಡೆದ ಹತ್ಯೆ ಅತ್ಯಂತ ಖಂಡನೀಯ. ಅದರ ತನಿಖೆ ಆರಂಭವಾಗುವ ಮುನ್ನ ಸಚಿವ ಈಶ್ವರಪ್ಪಪ್ರಚೋದನಕಾರಿ ಹೇಳಿಕೆಯನ್ನು ಏಕೆ ನೀಡಿದರು? ಅವರಿಗೇನಾದರೂ ವಿವರಗಳು ಗೊತ್ತಿವೆಯೇ?. ಆರೋಪಿಗಳು ಯಾರು ಎಂಬುದು ಈಶ್ವರಪ್ಪನವರಿಗೆ ಗೊತ್ತಿದ್ದರೆ ಪೊಲೀಸರು ಅವರನ್ನು ಕೂಡ ವಿಚಾರಣೆಗೆ ಗುರಿಪಡಿಸಬೇಕಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂವಿಧಾನೇತರ ಶಕ್ತಿಗಳ ಒತ್ತಡಕ್ಕೆ ಒಳಗಾಗದೆ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂಬುದನ್ನು ಮರೆಯಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X