ಕೋಲಾರ: ವೃದ್ಧನ ಕತ್ತು ಸೀಳಿ ಕೊಲೆ

ಕೋಲಾರ (ಶ್ರೀನಿವಾಸಪುರ), ಫೆ.22: ಮಾವಿನ ತೋಪಿನಲ್ಲಿ ಕತ್ತು ಸೀಳಿ ವೃದ್ಧನ ಬರ್ಬರ ಕೊಲೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಇಂದಿರಾ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಶ್ರೀನಿವಾಸಪುರದ ಗುಂಡುಮನತ್ತ ಗ್ರಾಮದ ನಿವಾಸಿ ಮುನಿಸ್ವಾಮಿ (62) ಕೊಲೆಯಾದವರು. ಅವರ ಮೃತದೇಹ ಶ್ರೀನಿವಾಸಪುರದ ಇಂದಿರಾ ನಗರದ ಬಳಿಯ ಮಾವಿನ ತೋಪಿನಲ್ಲಿ ಕಂಡುಬಂದಿದೆ.
ಕುರಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದ ಮುನಿಸ್ವಾಮಿಯವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story





