ಹಿಜಾಬ್ ವಿಚಾರ: ಅಲ್ಪಸಂಖ್ಯಾತ ಇಲಾಖೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ 6ನೇ ತರಗತಿ ವಿದ್ಯಾರ್ಥಿನಿ

ಕಲಬುರಗಿ, ಫೆ.22: ಹಿಜಾಬ್, ಸ್ಕಾರ್ಫ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿರುವ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕ್ರಮವನ್ನು ಪ್ರಶ್ನಿಸಿ 12 ವರ್ಷದ ಬಾಲಕಿಯೊಬ್ಬಳು ನ್ಯಾಯಾಲಯದ ಮೆಟ್ಟಿಲೇರಿಟ್ಟಿದ್ದಾಳೆ.
ಹಿಜಾಬ್, ಸ್ಕಾರ್ಫ್ ಗೆ ನಿರ್ಬಂಧ ವಿಧಿಸಿರುವ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಆದೇಶದ ವಿರುದ್ಧ ಕಲಬುರಗಿಯ ಮಲಗತ್ತಿ ರಸ್ತೆಯ ನಿವಾಸಿ, 12 ವರ್ಷದ 6ನೇ ತರಗತಿಯ ಬಾಲಕಿಯೊಬ್ಬಳು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಉಡುಪಿಯಲ್ಲಿ ಪ್ರಾರಂಭದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ರಾಜ್ಯಾದ್ಯಂತ ಹಬ್ಬಿದೆ. ಈ ಬಗ್ಗೆ ಉಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ಸಹ ಹೊರಡಿಸಿದ್ದು, ಪ್ರಕರಣ ನ್ಯಾಯಾಲಯದ ವಿಚಾರಣೆ ಹಂತದಲ್ಲಿ ಇದೆ.
ಈ ನಡುವೆ ಫೆ.16ರಂದು ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ತನ್ನ ಅಧೀನದಲ್ಲಿರುವ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಝಾದ್ ಮಾದರಿ ಶಾಲೆ(ಆಂಗ್ಲ ಮಾಧ್ಯಮ)ಗಳಲ್ಲಿ ಯಾವುದೇ ಕಾರಣಕ್ಕೂ ತರಗತಿ ಕೊಠಡಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್ ಯಾವುದೇ ಇನ್ನಿತರ ಧಾರ್ಮಿಕ ಬಾವುಟಗಳನ್ನು ಧರಿಸದಂತೆ ನಿರ್ಬಂಧ ಹೇರಿ ಸುತ್ತೋಲೆ ಹೊರಡಿಸಲಾಗಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹೊರಡಿಸಿರುವ ಈ ಆದೇಶ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಇದರ ವಿರುದ್ಧ ಕಿಡಿಕಾರಿದ್ದರು. ಈ ಆದೇಶವನ್ನು ಹಿಪಡೆಯಬೇಕೆಂದು ಅಗ್ರಹಿಸಿದ್ದಾರೆ.







