ಸಹಜ ಸ್ಥಿತಿಯತ್ತ ಶಿವಮೊಗ್ಗ: ಬಿಗಿ ಪೊಲೀಸ್ ಬಂದೋಬಸ್ತ್

ಶಿವಮೊಗ್ಗ, ಫೆ.22: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಬೂದಿ ಮುಚ್ಚಿದ ಕೆಂಡವಾಗಿರುವ ಶಿವಮೊಗ್ಗ ಸಹಜಸ್ಥಿತಿಗೆ ಬರುತ್ತಿದೆ. ಈ ನಡುವೆ ಕಳೆದ ರಾತ್ರಿ ಉದ್ರಿಕ್ತರಿಂದ ನಗರದ ಹಲವೆಡೆ ಕಲ್ಲು ತೂರಾಟ, ದ್ವಿಚಕ್ರಗಳಿಗೆ ಹಾನಿಯಾದಂತಹ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಹೊರಜಿಲ್ಲೆಗಳ 3 ಜನ ಎಸ್ಪಿ, ಒಬ್ಬರು ಅಡಿಶನಲ್ ಎಸ್ಪಿ, 12 ಜನ ಡಿವೈಎಸ್ಪಿ, 39 ಜನ ಪೊಲೀಸ್ ಇನ್ ಸ್ಪೆಕ್ಟರ್, 54 ಜನ ಪಿಎಸ್ಸೈ,48 ಜನ ಎಎಸ್ಸೈ, 819 ಮಂದಿ ಕಾನ್ಸ್ ಟೇಬಲ್, 20 ಕೆಎಸ್ಆರ್ ಪಿ ತುಕಡಿ, 10-ಡಿಎಆರ್ ತುಕಡಿಗಳು ಮತ್ತು 01- ಆರ್ ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.










