''ಹಿಂದುತ್ವ ಹಿಂದುತ್ವ ಅಂದಿದಕ್ಕೆ ಇವತ್ತು ಆ ಸ್ಥಿತಿಯಲ್ಲಿ ಬಿದ್ದಿದ್ದಾನೆ ನನ್ನ ತಮ್ಮ'': ಮೃತ ಹರ್ಷನ ಸಹೋದರಿಯ ಅಳಲು

ಮೃತ ಹರ್ಷ ಸಹೋದರಿ
ಬೆಂಗಳೂರು: ರವಿವಾರ ರಾತ್ರಿ ಶಿವಮೊಗ್ಗ ನಗರದ ಭಾರತಿ ಕಾಲನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿಯೊಬ್ಬರು 'ಹಿಂದುತ್ವ ಅಂದಿದಕ್ಕೆ ನನ್ನ ತಮ್ಮ ಇವತ್ತು ಆ ಸ್ಥಿತಿಯಲ್ಲಿ ಬಿದ್ದಿದ್ದಾನೆ' ಎಂದು ಅಳಲು ತೋಡಿಕೊಂಡಿದ್ದು, ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ಶವಯಾತ್ರೆ ಮೂಲಕ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆದ ಮೃತ ಹರ್ಷ ಅವರ ಅಂತ್ಯ ಸಂಸ್ಕಾರ ಬಳಿಕ ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯಿಸಿದ ದುಃಖತಪ್ತ ಸಹೋದರಿ ಅಳಲು ತೋಡಿಕೊಂಡಿದ್ದಾರೆ.
''ಹಿಂದುತ್ವ ಹಿಂದೂ ಹಿಂದುತ್ವ ಅಂದಿದಕ್ಕೆ ಇವತ್ತು ಆ ಸ್ಥಿತಿ ಅಲ್ಲಿ ಬಿದ್ದಿದ್ದಾನೆ ನನ್ನ ತಮ್ಮ ದಯವಿಟ್ಟು ಎಲ್ಲರೂ ಒಂದು ಸಲ ನೋಡಿ, ಎಲ್ಲ ನನ್ನ ಅಣ್ಣ ತಮ್ಮಂದಿರಿಗೂ ಕೈ ಮುಗಿದು ಬೇಡ್ಕೋತೀನಿ, ಮಸ್ಲಿಮರಿಗೂ ಬೇಡ್ಕೋತೀನಿ ಹಿಂದೂ ಅವರಿಗೂ ಬೇಡ್ಕೋತೀನಿ ನಿಮ್ಮ ಅಪ್ಪ-ಅಮ್ಮಂದಿರಿಗೆ ಒಳ್ಳೆಯ ಮಕ್ಕಳಾಗಿರಿ ಹೊರತು ಇದೆಲ್ಲ ಮಾಡೋದಕ್ಕೆ ಹೋಗಬೇಡಿ'' ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಯಾವುದೇ ಸಂಘಟನೆಗಳ ಕೈವಾಡವಿಲ್ಲ, ಸಣ್ಣಪುಟ್ಟ ವೈರತ್ವವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ ಎಂದ ಸಚಿವ ನಾರಾಯಣ ಗೌಡ







