ಏರ್‌ಥಿಂಗ್ಸ್ ಮಾಸ್ಟರ್ಸ್ ಚೆಸ್: ಇನ್ನೂ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ ಪ್ರಜ್ಞಾನಂದ

ಹೊಸದಿಲ್ಲಿ: ತನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ ಭಾರತದ ಉದಯೋನ್ಮುಖ ಚೆಸ್ ತಾರೆ ಆರ್. ಪ್ರಜ್ಞಾನಂದ ಅವರು ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನ 10 ಮತ್ತು 12 ರ ಸುತ್ತುಗಳಲ್ಲಿ ಸಹ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆಂಡ್ರೆ ಎಸಿಪೆಂಕೊ ಹಾಗೂ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಗೆಲುವು ದಾಖಲಿಸಿದರು.
ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಅದ್ಭುತ ಗೆಲುವಿನ ಒಂದು ದಿನದ ನಂತರ 16 ವರ್ಷ ವಯಸ್ಸಿನ ಪ್ರಜ್ಞಾನಂದ ಎರಡು ಗೆಲುವುಗಳನ್ನು ದಾಖಲಿಸಿದರು .
ಮಂಗಳವಾರ ಆರಂಭದಲ್ಲಿ ನೊಡಿರ್ಬೆಕ್ ಅಬ್ದುಸಟ್ಟೊರೊವ್ ವಿರುದ್ಧ ಡ್ರಾ ಮಾಡಿಕೊಂಡರು. ಆದಾಗ್ಯೂ, ಅವರು 11 ನೇ ಸುತ್ತಿನಲ್ಲಿ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಇಯಾನ್ ನೆಪೊಮ್ನಿಯಾಚ್ಚಿ ವಿರುದ್ಧ ಸೋತರು. ಅವಳಿ ಗೆಲುವು ಮತ್ತು ಡ್ರಾ ಸಾಧಿಸಿದರೂ ಪ್ರಜ್ಞಾನಂದ 15 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದ್ದಾರೆ.
Next Story





