ರಾಜ್ಯ ಕಾನೂನು ವಿವಿ ಕುಲಪತಿ ಮುಂದುವರಿಕೆ ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ

ಬೆಂಗಳೂರು, ಫೆ.22: ರಾಜ್ಯ ಕಾನೂನು ವಿಶ್ವವಿದ್ಯಾಲಯ(ಕೆಎಸ್‍ಎಲ್‍ಯು) ಕುಲಪತಿಯಾಗಿ ಪ್ರೊ.ಈಶ್ವರ ಭಟ್ ಅವರನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ.
ಕಾನೂನು ವಿದ್ಯಾರ್ಥಿಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಪೀಠ, ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಯ್ದೆ ಅನ್ವಯ, 65 ವರ್ಷ ಮೀರಿದವರು ಕುಲಪತಿಯಾಗುವಂತಿಲ್ಲ. ಹಾಲಿ ಕುಲಪತಿಗೆ 65 ವರ್ಷ ಪೂರ್ಣಗೊಂಡಿದೆ ಎಂದರು.
ಅದಕ್ಕೆ ನ್ಯಾಯಪೀಠ, ಕುಲಪತಿಗಳ ಖಚಿತ ಜನ್ಮದಿನಾಂಕದ ಬಗ್ಗೆ ದಾಖಲೆಗಳಿಲ್ಲ. ಮಾ.2ರೊಳಗೆ ಮಾಹಿತಿ ಸಂಗ್ರಹಿಸಿ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
Next Story





