ಉಡುಪಿ: ಮೊದಲ ಡೋಸ್ ಲಸಿಕೆಯಲ್ಲಿ ಶೇ.100 ಸಾಧನೆ
![ಉಡುಪಿ: ಮೊದಲ ಡೋಸ್ ಲಸಿಕೆಯಲ್ಲಿ ಶೇ.100 ಸಾಧನೆ ಉಡುಪಿ: ಮೊದಲ ಡೋಸ್ ಲಸಿಕೆಯಲ್ಲಿ ಶೇ.100 ಸಾಧನೆ](https://www.varthabharati.in/sites/default/files/images/articles/2022/02/22/325907-1645546265.gif)
ಸಾಂದರ್ಭಿಕ ಚಿತ್ರ
ಉಡುಪಿ, ಫೆ.22: ಉಡುಪಿ ಜಿಲ್ಲೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಶೇ.100 ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 18 ವರ್ಷ ಮೇಲಿನ ಒಟ್ಟು 9,99,000 ಮಂದಿಗೆ ಲಸಿಕೆ ನೀಡುವ ಗುರಿ ಇದ್ದು, ಇಂದಿನವರೆಗೆ ಒಟ್ಟು 10,02,537 ಮಂದಿಗೆ ಮೊದಲ ಡೋಸ್ ಲಸಿಕೆಯನ್ನು ನೀಡುವ ಮೂಲಕ ಶೇ.100.35 ಸಾಧನೆ ಮಾಡಲಾಗಿದೆ ಎಂದರು.
ಅದೇ ರೀತಿ ಈವರೆಗೆ ಒಟ್ಟು 9,02,614 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ಸಹ ನೀಡಿದ್ದು, ಶೇ.90.35 ಸಾಧನೆ ಮಾಡಲಾಗಿದೆ. ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು ಅವಧಿ ಮುಗಿದ 20,000 ದಷ್ಟು ಮಂದಿ ಬಾಕಿ ಉಳಿದಿದ್ದಾರೆ ಎಂದರು.
15ರಿಂದ 18ವರ್ಷದೊಳಗಿನ 53,555 ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದ್ದು, ಇಂದಿನವರೆಗೆ ಒಟ್ಟು 47,856 ಮಂದಿಗೆ ಮೊದಲ ಡೋಸ್ (ಶೇ.89.36) ಹಾಗೂ 23,292 ಮಂದಿಗೆ ಎರಡನೇ ಡೋಸ್ (ಶೇ. 43.49) ಲಸಿಕೆಯನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.