ರಶ್ಯಾ-ಉಕ್ರೇನ್ ಬಿಕ್ಕಟ್ಟು: ತೈಲ ದರ ದಾಖಲೆ ಮಟ್ಟಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಪೂರ್ವ ಉಕ್ರೇನ್ನ ಎರಡು ಪ್ರಾಂತ್ಯಗಳಿಗೆ ನುಗ್ಗುವಂತೆ ಸೇನೆಗೆ ರಶ್ಯಾ ಅಧ್ಯಕ್ಷ ಪುಟಿನ್ ಕರೆ ನೀಡಿದ ಬೆನ್ನಲ್ಲೇ ಉಕ್ರೇನ್ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ತೈಲ ಪೂರೈಕೆ ಮೊಟಕುಗೊಳ್ಳುವ ಆತಂಕದಿಂದ ತೈಲ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬ್ಯಾರೆಲ್ಗೆ 100 ಡಾಲರ್ಗೆ ಸನಿಹ ತಲುಪಿದೆ. ರಶ್ಯಾದಿಂದ ಜರ್ಮನ್ಗೆ ತೈಲ ಪೂರೈಸುವ ನಾರ್ಡ್ ಸ್ಟ್ರೀಮ್ 2 ಗ್ಯಾಸ್ಪೈಪ್ ಲೈನ್ ಯೋಜನೆಗೆ ಜರ್ಮನ್ ತಡೆ ನೀಡಿದೆ. ಜೊತೆಗೆ, ರಶ್ಯಾದ ಮೇಲೆ ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ನ ನಿರ್ಬಂಧದ ಸಾಧ್ಯತೆಯ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಗಗನಕ್ಕೇರಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ಕ್ರೂಡ್ನ ದರ 2.4% ಏರಿಕೆಯಾಗಿ ಬ್ಯಾರಲ್ಗೆ 97.63 ಡಾಲರ್ ತಲುಪಿದೆ. 2014ರಲ್ಲಿ ಬ್ಯಾರಲ್ಗೆ 99.50 ಡಾಲರ್ಗೆ ಏರಿದ್ದು ಆ ಬಳಿಕದ ಅತ್ಯಂತ ಗರಿಷ್ಟ ದರ ಇದಾಗಿದೆ ಎಂದು ವರದಿಯಾಗಿದೆ.
Next Story





