ಉತ್ತರ ಪ್ರದೇಶ ಚುನಾವಣೆ: 59 ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಆರಂಭ

Photo: Twitter/@ANI
ಲಕ್ನೋ: ಉತ್ತರ ಪ್ರದೇಶದ 59 ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಬುಧವಾರ ಆರಂಭವಾಗಿದೆ. ಇಂದು ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದಲ್ಲಿ ಲಖಿಂಪುರ ಖೇರಿ, ಲಕ್ನೋ, ಉನ್ನಾವೋ, ಪಿಲಿಭಿತ್, ಸೀತಾಪುರ್, ಹರ್ದೋಯ್, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ ವಾಗಿದ್ದು, 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಿಂದಾಗಿ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಗಮನ ಸೆಳೆದಿದೆ. ಲಖಿಂಪುರ ಖೇರಿ ಕ್ಷೇತ್ರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪ್ರತಿಷ್ಠೆಯೂ ಪಣಕ್ಕಿಡಲಿದೆ. ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ್ದ ಆರೋಪದಲ್ಲಿ ಅವರ ಪುತ್ರ ಆಶಿಶ್ ಮಿಶ್ರಾ ಬಂಧನವಾಗಿತ್ತು.
2017ರ ಚುನಾವಣೆಯಲ್ಲಿ ಈ 59 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳನ್ನು ಬಿಜೆಪಿ, 4 ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ, 3 ಕ್ಷೇತ್ರಗಳನ್ನು ಬಿಎಸ್ಪಿ ಮತ್ತು 1 ಕ್ಷೇತ್ರವನ್ನು ಅಪ್ನಾ ದಳ್ ಗೆದ್ದುಕೊಂಡಿತ್ತು.
ಇದನ್ನೂ ಓದಿ: ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ





