ತಲಪಾಡಿಯಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ: ದೂರು-ಪ್ರತಿದೂರು ದಾಖಲು
ಉಳ್ಳಾಲ, ಫೆ.23: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ತಂಡಗಳು ನಡುವೆ ಹೊಡದಾಟ ನಡೆದಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ರಸ್ತೆ ಗೆ ಜಾಗ ಬಿಟ್ಟು ಕೊಡುವ ವಿಚಾರವಾಗಿ ಮಂಗಳವಾರ ಸಂಜೆ ಯಶು ಪಕ್ಕಳ ಎಂಬವರಿಗೆ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಮತ್ತು ತಂಡ ಹಲ್ಲೆ ನಡೆಸಿ ಬೆದರಿಕೆ ಹಾಕಿದೆ ಎಂದು ಪೊಲೀಸ್ ದೂರು ನೀಡಲಾಗಿದೆ.
ನಿನ್ನೆ ಸಂಜೆ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಶೈಲೇಶ್ ಮತ್ತು ನಾಲ್ಕೈದು ಮಂದಿಯ ತಂಡ ತನ್ನ ಜಮೀನಿಗೆ ಅಕ್ರಮ ಪ್ರವೇಶಿಸಿ ತನ್ನ ಮೇಲೆ ಸೋಂಟೆಯಿಂದ ಹಲ್ಲೆ ನಡೆಸಿದೆ ಎಂದು ಯಶು ಪಕ್ಕಳ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಯಶು ಪಕ್ಕಳ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು
ಗ್ರಾಪಂ ಸದಸ್ಯ ಶೈಲೇಶ್ ಕೂಡ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತನ್ನ ಮೇಲೆ ಯಶು ಪಕ್ಕಳ ಮತ್ತು ತಂಡ ಹಲ್ಲೆ ನಡೆಸಿರುವುದಾಗಿ ಪ್ರತಿದೂರು ನೀಡಿದ್ದಾರೆ. ಈ ಬಗ್ಗೆಯೂ ದೂರು ದಾಖಲಾಗಿದೆ.





