ನಾಗಮಂಗಲ: ಉದ್ಯಮಿ ಮನೆ-ಕಚೇರಿ ಮೇಲೆ ಐಟಿ ದಾಳಿ

ಮಂಡ್ಯ, ಫೆ.23: ನಾಗಮಂಗಲ ಪಟ್ಟಣದಲ್ಲಿರುವ ಸ್ಟಾರ್ ಹ್ಯಾಚರೀಸ್ ಗ್ರೂಪ್ ಮಾಲಕ ಅಮಾನುಲ್ಲಾ ಮುರ್ತುಝಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ಬುಧವಾರ ಬೆಳಗ್ಗೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿರುವ ಸ್ಟಾರ್ ಗ್ರೂpf ಮಾಲಕರ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಪತ್ರಗಳನ್ನು ಪರಿಶೀಲಿಸಿದ್ದಾರೆ.
ಅಮಾನುಲ್ಲಾ ಮುರ್ತುಝಾ ನಾಗಮಂಗಲದಲ್ಲಿ ಕೋಳಿ ಸಾಕಣೆ, ಕೋಳಿ ಮೊಟ್ಟೆ, ಕೋಳಿ ಆಹಾರ ತಯಾರಿಕೆ ಘಟಕ ಹಾಗೂ ಹೋಲ್ ಸೇಲ್ ಮಾರಾಟಗಾರರಾಗಿದ್ದಾರೆ.
Next Story





