ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ಹೊಂದಲು ತನ್ನ ನಾಗರಿಕರಿಗೆ ಅನುಮತಿ ನೀಡುವ ಕಾನೂನು ಪರ ಮತ ಚಲಾಯಿಸಿದ ಉಕ್ರೇನ್ ಸಂಸದರು
ರಶ್ಯಾ - ಉಕ್ರೇನ್ ಯುದ್ಧ ಸನಿಹ?

Photo: PTI
ಕೈವ್: ಉಕ್ರೇನಿಯನ್ನರು ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ಹೊಂದಲು ಅನುಮತಿ ನೀಡುವ ಕರಡು ಕಾನೂನನ್ನು ಮೊದಲ ಬಾರಿ ಅಂಗೀಕರಿಸಲು ಉಕ್ರೇನ್ ಸಂಸತ್ತು ಬುಧವಾರ ಮತ ಚಲಾಯಿಸಿದೆ ಎಂದು ವರದಿಯಾಗಿದೆ.
ರಶ್ಯಾ - ಉಕ್ರೇನ್ ನಡುವಿನ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆ ಉಕ್ರೇನ್ ಸಂಸದರು ಈ ರೀತಿಯ ಕಾನೂನಿಗೆ ಮತ ಚಲಾಯಿಸಿದ ನಂತರ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ. ರಶ್ಯಾ-ಉಕ್ರೇನ್ ಯುದ್ಧ ಸನಿಹಿತವಾಗಿದೆ ಎನ್ನಲಾಗುತ್ತಿದೆ.
"ಈ ಕಾನೂನಿನ ಅಳವಡಿಕೆಯು ಸಂಪೂರ್ಣವಾಗಿ ರಾಜ್ಯ ಮತ್ತು ಸಮಾಜದ ಹಿತಾಸಕ್ತಿಯನ್ನು ಒಳಗೊಂಡಿದೆ" ಎಂದು ಕರಡು ಕಾನೂನಿನ ಲೇಖಕರು ಹೇಳಿದರು.
"ಉಕ್ರೇನ್ ನಾಗರಿಕರಿಗೆ ಈಗಿರುವ ಬೆದರಿಕೆಗಳು ಮತ್ತು ಅಪಾಯಗಳ" ಕಾರಣದಿಂದಾಗಿ ಕಾನೂನು ಅಗತ್ಯವಿದೆ ಎಂದು ಅವರು ಹೇಳಿದರು.
ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪೂರ್ವ ಉಕ್ರೇನ್ ನ ಎರಡು ಪ್ರದೇಶಗಳನ್ನು ಸ್ವತಂತ್ರವೆಂದು ಗುರುತಿಸಿದ ನಂತರ ಹಾಗೂ ಪೂರ್ವ ಉಕ್ರೇನ್ ಗೆ ಸೈನ್ಯವನ್ನು ನಿಯೋಜಿಸಲು ಆದೇಶಿಸಿದ ನಂತರ ದಶಕಗಳಲ್ಲಿ ಯುರೋಪಿನಲ್ಲಿ ಅತ್ಯಂತ ಕೆಟ್ಟ ಭದ್ರತಾ ಬಿಕ್ಕಟ್ಟು ತಲೆದೋರಿದೆ.





