ಮಹಿಳೆಯರಿಗೆ ಬ್ಯಾರಿ ಭಾಷಣ ಸ್ಪರ್ಧೆ: ಆಹ್ವಾನ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಾ.8ರಂದು ನಗರದ ಸಾಮರ್ಥ್ಯ ಸೌಧದ ಸಭಾಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕ ಮಹಿಳೆಯರಿಗೆ ಹಾಗೂ ಹೈಸ್ಕೂಲ್, ಪಿಯುಸಿ, ಪದವಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಬ್ಯಾರಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
'ಇಂಡತ್ತೊ ಮಕ್ಕ ನಾಲೆರೊ ಭವಿಷ್ಯ' ಎಂಬ ವಿಷಯದಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು 'ದೇಶತ್ತೊ ಏಳಿಗೆಲ್ ಪೆನ್ನಿಙ' ಎಂಬ ವಿಷಯದಲ್ಲಿ ಸಾರ್ವಜನಿಕ ಮಹಿಳೆಯರಿಗೆ ಬ್ಯಾರಿ ಭಾಷಣ ಸ್ಪರ್ಧೆ ನಡೆಯಲಿದೆ.
ಎಲ್ಲಾ ಸಾರ್ವಜನಿಕ ಮಹಿಳೆಯರಿಗೆ ಹಾಗೂ ಹೈಸ್ಕೂಲ್, ಪಿಯುಸಿ, ಪದವಿ ವಿದ್ಯಾರ್ಥಿನಿಯರಿಗೆ ಮುಕ್ತ ಅವಕಾಶ. ಎಲ್ಲಾ ಭಾಷೆ ಮತ್ತು ಧರ್ಮದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಷಣವು ಬ್ಯಾರಿ ಭಾಷೆಯಲ್ಲಿಯೇ ಇರತಕ್ಕದ್ದು. ಸ್ಪರ್ಧೆಯ ಅವಧಿಯು ಮೂರು ನಿಮಿಷಕ್ಕೆ ಸೀಮಿತವಾಗಿರುತ್ತದೆ.
ಮಾ.2ರೊಳಗೆ ಮೊ.ಸಂ: 7483946578/0824-2412297ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಅಕಾಡಮಿಯ ವಿಚಾರದಾರೆಗೆ ವಿರುದ್ಧವಾದ ಮತ್ತು ಸೌಹಾರ್ದತೆಗೆ ಕುಂದುಂಟಾಗುವ ಯಾವುದೇ ಭಾಷಣವನ್ನು ಪರಿಗಣಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಈ ಎರಡು ವಿಭಾಗದ ಸ್ಪರ್ಧೆಯ ವಿಜೇತರಿಗೆ ಪ್ರಥಮ ತಲಾ 1,500ರೂ, ದ್ವಿತೀಯ 1,000 ರೂ., ತೃತೀಯ 750 ರೂ. ಹಾಗೂ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯು ಪೂ.11ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ ಎಂದು ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿರುತ್ತಾರೆ.