ರೈಲ್ವೆ ಹಳಿ ಉನ್ನತೀಕರಣ ಕಾಮಗಾರಿ ಮುಂದೂಡಿಕೆ:ಮಾರ್ಗದ ಎಲ್ಲಾ ರೈಲುಗಳ ಸಂಚಾರ ಎಂದಿನಂತೆ
ಉಡುಪಿ, ಫೆ.23: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಕ್ಕೆ ಸೇರಿದ ಪಡೀಲ್- ಕುಲಶೇಖರ ನಡುವಿನ ರೈಲ್ವೆ ಹಳಿಯ ದ್ವಿಪಥ ಕಾಮಗಾರಿಯನ್ನು ಮುಂದೂಡಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.
ಇದರಿಂದ ಫೆ.16ರಿಂದ ಮಾ.7ರವರೆಗೆ ನಡೆಯಬೇಕಿದ್ದ ಹಳಿಯ ಉನ್ನತೀಕರಣ ಕಾಮಗಾರಿ ನಡೆಯುವುದಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಯಾವುದೇ ಬದಲಾವಣೆಯಿಲ್ಲದೇ ಹಿಂದಿನಂತೆಯೇ ಸಂಚರಿಸಲಿವೆ ಎಂದು ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
Next Story