ಬ್ರಹ್ಮಾವರ: ತಮ್ಮನ ನಾಪತ್ತೆಯಿಂದ ನೊಂದ ಅಣ್ಣ ಆತ್ಮಹತ್ಯೆ
ಬ್ರಹ್ಮಾವರ, ಫೆ.23: ನಾಪತ್ತೆಯಾದ ತಮ್ಮನ ಚಿಂತೆಯಲ್ಲಿ ಅಣ್ಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.22ರಂದು ರಾತ್ರಿ ಕಾಡೂರು ಶಾಲೆಯ ಹತ್ತಿರ ನಡೆದಿದೆ.
ಮೃತರನ್ನು ಕಾಡೂರು ನಿವಾಸಿ ದಿನೇಶ(39) ಎಂದು ಗುರುತಿಸಲಾಗಿದೆ. ತನ್ನ ತಮ್ಮ ಹರೀಶ ನಾಪತ್ತೆಯಾಗಿರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ದಿನೇಶ್, ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
Next Story