ಉತ್ತರಪ್ರದೇಶ: ವೋಟಿಗಾಗಿ ಮತದಾರರ ಮುಂದೆ ಬಸ್ಕಿ ಹೊಡೆದ ಬಿಜೆಪಿ ಶಾಸಕ; ವಿಡಿಯೋ ವೈರಲ್

Photo: twitter
ಲಕ್ನೋ: ಉತ್ತರ ಪ್ರದೇಶ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ನಾಯಕ ಭೂಪೇಶ್ ಚೌಬೆ ಅವರು ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದ ಎಲ್ಲಾ ತಪ್ಪಿಗೆ ಬಸ್ಕಿ ಹೊಡೆದು ಕ್ಷಮೆ ಕೇಳಿ ಮತಯಾಚಿಸಿದ ವಿಡಿಯೋ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ವೀಡಿಯೊದಲ್ಲಿ, ಅವರು ಕಿವಿ ಹಿಡಿದು ಕುಳಿತು ಏಳುತ್ತಿರುವುದನ್ನು ನೋಡಬಹುದು.
ಉತ್ತರ ಪ್ರದೇಶದ ಸೋನ್ಭದ್ರ್ನ ರಾಬರ್ಟ್ಸ್ಗಂಜ್ನ ಶಾಸಕರಾಗಿರುವ ಭೂಪೇಶ್ ಚೌಬೆ ಅವರನ್ನೇ ಬಿಜೆಪಿ ಈ ಬಾರಿ ಮತ್ತೆ ಕಣಕ್ಕಿಳಿಸಿದ್ದು, ಮತದಾರರ ಮುಂದೆ ತಮ್ಮ ಎಲ್ಲಾ ತಪ್ಪುಗಳಿಗೂ ಬಸ್ಕಿ ಹೊಡೆದು ಕ್ಷಮೆ ಕೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಫೆಬ್ರವರಿ 10, 14, 20, 23 ರಂದು ನಾಲ್ಕು ಹಂತದ ಮತದಾನ ಮುಗಿದಿದೆ. ಫೆಬ್ರವರಿ 27, ಮಾರ್ಚ್ 3, 7 ರಂದು ಇನ್ನು ಮೂರು ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಸಲಾಗುತ್ತದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.
यूपी के एक BJP विधायक, पिछले 5 साल की गलतियों की माफी मांग रहे हैं.
— Ranvijay Singh (@ranvijaylive) February 23, 2022
क्या लगता है, जनता माफ करेगी?pic.twitter.com/VZyIBjEwgn







