ಕಂದಕ್ ಮುಸ್ಲಿಂ ಜಮಾತ್‌ನ ನೂತನ ಕಚೇರಿ ಉದ್ಘಾಟನೆ

ಮಂಗಳೂರು, ಫೆ.23: ಕಂದಕ್ ಮುಸ್ಲಿಂ ಜಮಾತ್ (ರಿ) ಇದರ ನೂತನ ಕಚೇರಿ ಉದ್ಘಾಟನೆ ಮತ್ತು ಹಾಗೂ ಪದ್ಮಶೀ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮವು ಕಂದಕ್ ಪ್ರದೇಶದ ಬದ್ರಿಯಾ ರಸ್ತೆಯಲ್ಲಿ ಬುಧವಾರ ನಡೆಯಿತು.
ಕೇಂದ್ರ ಜುಮಾ ಮಸೀದಿಯ ಖತೀಬ್ ಮೌಲನಾ ಅಬೂ ಅಕ್ರಂ ಬಾಖವಿ, ಬದ್ರಿಯಾ ಜುಮಾ ಮಸೀದಿಯ ಖತೀಬ್ ಮೌಲನಾ ಶೇಖ್ ಅಬ್ದುಲ್ಲಾ ಮುಸ್ಲಿಯಾರ್, ಅಝ್ಹರಿಯಾ ಮದ್ರಸದ ಮುದರ್ರಿಸ್ ಮೌಲನಾ ಹೈದರ್ ಮದನಿ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ನ್ಯಾಯವಾದಿ ಬಿ.ಎ.ಮುಹಮ್ಮದ್ ಹನೀಫ್, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಹಿರಿಯರಾದ ಉಸ್ಮಾನ್ ಮೊಯಿದಿನ್, ಅಬ್ದುಲ್ ರೆಹಮಾನ್, ಅಬ್ದುಲ್ ಖಾದರ್, ಕಂದಕ್ ಮುಸ್ಲಿಂ ಜಮಾತಿನ ಅಬ್ದುಲ್ ಸಲಾಂ ಕಂದಕ್, ಶರೀಫ್, ಸಿದ್ದೀಕ್, ಅಶ್ರಫ್, ಆಸೀಫ್, ಸಲಾಂ ಕುತ್ತಾರ್, ಕಾಸಿಂ, ಹಕೀಂ, ಮುಹಮ್ಮದ್ ಹಸನ್, ಸಫ್ವಾನ್, ಮುಸ್ತಫಾ, ಮೊಶಿನ್, ಅಲ್ತಾಫ್ ಕೆ.ಪಿ ಮತ್ತಿತರರು ಉಪಸ್ಥಿತರಿದ್ದರು.

Next Story