ಬೆಳ್ತಂಗಡಿ: ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಎಸ್‌ಡಿಪಿಐ ಧರಣಿ

ಬೆಳ್ತಂಗಡಿ: ಶಿವಮೊಗ್ಗದಲ್ಲಿ ಗಲಭೆಗೆ ಪ್ರಚೋದನೆ ಮತ್ತು ಹಿಂಸಾಚಾರಕ್ಕೆ ನೇತೃತ್ವ ನೀಡಿದ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬೆಳ್ತಂಗಡಿಯಲ್ಲಿ ಧರಣಿ ನಡೆಸಲಾಯಿತು.
ನಗರ ಮೂರು ಮಾರ್ಗದಿಂದ ತಾಲ್ಲೂಕು ಕಚೇರಿಯವರೆಗೆ ಪಕ್ಷದ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ, ತಾಲ್ಲೂಕು ತಹಶೀಲ್ದಾರ್ ರವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈಶ್ವರಪ್ಪ ವಿರುದ್ಧ ಘೋಷಣೆ ಕೂಗುತ್ತಾ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ನವಾಝ್ ಶರೀಫ್ ಕಟ್ಟೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ, ಇನಾಸ್ ರೋಡ್ರಿಗಸ್, ಹನೀಫ್ ಟಿ ಎಸ್, ಸ್ವಾಲಿ ಮದ್ದಡ್ಕ, ಸ್ವಾದಿಕ್ ಲಾಯಿಲಾ, ಪಂಚಾಯತ್ ಸದಸ್ಯರುಗಳಾದ ಮುಸ್ತಾಫಾ ಜಿ ಕೆ, ರಿಯಾಝ್ ಮದ್ದಡ್ಕ, ಕಬೀರ್ ಕಾಜೂರು ಮತ್ತು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.





