Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಜೆಟ್ ಹಂಚಿಕೆಯ ‘ವೈಕಲ್ಯ’

ಬಜೆಟ್ ಹಂಚಿಕೆಯ ‘ವೈಕಲ್ಯ’

ವಾರ್ತಾಭಾರತಿವಾರ್ತಾಭಾರತಿ24 Feb 2022 12:05 AM IST
share
ಬಜೆಟ್ ಹಂಚಿಕೆಯ ‘ವೈಕಲ್ಯ’

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅಂಗವೈಕಲ್ಯ ಎನ್ನುವುದು ಅಪರಾಧವಲ್ಲ. ಅಂಗವೈಕಲ್ಯ ದೌರ್ಬಲ್ಯವೂ ಅಲ್ಲ. ವಿಶ್ವದ ಅತಿ ದೊಡ್ಡ ಸಾಧಕರಲ್ಲಿ ಅಂಗವೈಕಲ್ಯಗಳನ್ನು ಹೊಂದಿದ ಸಾವಿರಾರು ಜನರಿದ್ದಾರೆ. ಚಲಿಸುವುದಕ್ಕೆ ಅಸಾಧ್ಯವಾಗಿರುವ, ಮಾತನಾಡುವುದಕ್ಕೂ ಕಷ್ಟವಿದ್ದ ಸ್ಟೀಫನ್ ಹಾಕಿಂಗ್ ಎನ್ನುವ ಅಚ್ಚರಿಯೇ ವೈಕಲ್ಯ ಮನುಷ್ಯನ ದೌರ್ಬಲ್ಯ ಅಲ್ಲ ಎನ್ನುವುದನ್ನು ಹೇಳುತ್ತದೆ. ಆದರೆ ಅಂಗವಿಕಲರ ಕುರಿತಂತೆ ಸಮಾಜ, ದೇಶದ ನಿರ್ಲಕ್ಷ ಅವರನ್ನು ಕೆಲವೊಮ್ಮೆ ದುರ್ಬಲರನ್ನಾಗಿ ಮಾಡಬಹುದು. ಆದುದರಿಂದಲೇ, ವಿಕಲ ಚೇತನರಿಗೆ ಸರಕಾರ ವಿಶೇಷ ಗಮನವನ್ನು ನೀಡಬೇಕು. ಸದ್ಯದ ದಿನಗಳಲ್ಲಿ ಈ ಸಮುದಾಯದ ಕುರಿತಂತೆ ಇನ್ನಷ್ಟು ಕಾಳಜಿ ವಹಿಸಬೇಕಾದ ಅಗತ್ಯವಿದೆ. ಆದುದರಿಂದಲೇ ಸರಕಾರ ಬಜೆಟ್‌ನಲ್ಲಿ ವಿಕಲ ಚೇತನರಿಗಾಗಿ ವಿಶೇಷ ನಿಧಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರ ಹಲವು ವೈಕಲ್ಯಗಳಿಂದ ನರಳುತ್ತಿದೆ. ಸ್ವತಃ ವೈಕಲ್ಯವನ್ನು ಅನುಭವಿಸುತ್ತಿರುವ ಸರಕಾರ, ಅಂಗವೈಕಲ್ಯ ಹೊಂದಿದವರಿಗೆ ಪರಿಣಾಮಕಾರಿ ನೆರವಾಗುವುದಕ್ಕೆ ಹೇಗೆ ಸಾಧ್ಯ? ಇದರಿಂದಾಗಿ ವಿಕಲ ಚೇತನರು ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ಬಜೆಟ್‌ನಲ್ಲಿ ವಿಕಲಚೇತನರಿಗೆ ನೀಡುವ ಅನುದಾನವನ್ನು ಗಮನಿಸುತ್ತಾ ಬಂದರೆ ಇದು ಗಮನಕ್ಕೆ ಬರುತ್ತದೆ.

2022-23ರ ಸಾಲಿನ ಬಜೆಟ್‌ನಲ್ಲಂತೂ ಈ ಅನ್ಯಾಯ ತೀವ್ರಗೊಂಡಿದೆ. ಈ ಬಾರಿ ದೈಹಿಕ ಅಸಮರ್ಥತೆಯಿರುವ ಜನರಿಗೆ ಗಮನಾರ್ಹ ಪ್ರಮಾಣದಲ್ಲಿ ಅನುದಾನ ಹೆಚ್ಚಳ ಮಾಡಲು ಹಲವಾರು ಪ್ರಬಲ ಕಾರಣಗಳಿದ್ದವು. ಮೊದಲನೆಯದಾಗಿ, ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಸಾಂಕ್ರಾಮಿಕದಿಂದಾಗಿ ತುಂಬಾ ಬಳಲಿದ್ದಾರೆ. ಈ ಅವಧಿಯು ದೈಹಿಕ ಅಸಮರ್ಥತೆ ಹೊಂದಿದ್ದವರಿಗಂತೂ ಅತ್ಯಂತ ಕಷ್ಟದ ದಿನಗಳಾಗಿದ್ದವು. ತಮ್ಮ ಅತ್ಯಂತ ಪ್ರಾಥಮಿಕ ಅಗತ್ಯಗಳನ್ನು ಪೂರೈಸುವುದಕ್ಕೂ ಅವರು ಕಷ್ಟಪಡಬೇಕಾಗಿತ್ತು.

ಎರಡನೆಯದಾಗಿ, ಇತ್ತೀಚಿನ ದಿನಗಳಲ್ಲಿ ದೈಹಿಕ ಅಸಮರ್ಥತೆಗಳ ಪಟ್ಟಿಗೆ ಇನ್ನೂ ಹಲವು ವಿಭಾಗಗಳನ್ನು ಸೇರಿಸಲಾಗಿದೆ. ಹಾಗಾಗಿ, ಈಗ ದೈಹಿಕ ಅಸಮರ್ಥತೆ ಹೊಂದಿದವರ ಸಂಖ್ಯೆ ಹಿಂದಿನದಕ್ಕಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಾದರೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಒದಗಿಸಬೇಕಾಗಿತ್ತು. 2011ರ ಜನಗಣತಿಯ ಅವಧಿಯಲ್ಲಿ 7 ಮಾದರಿಯ ದೈಹಿಕ ಅಸಮರ್ಥತೆಗಳು ಗುರುತಿಸಲ್ಪಡುತ್ತಿದ್ದವು. ದೈಹಿಕ ಅಸಮರ್ಥರ ಹಕ್ಕುಗಳ ಕಾಯ್ದೆ ಅಂಗೀಕಾರಗೊಂಡ ಬಳಿಕ, ಈ ಪಟ್ಟಿಯಲ್ಲಿ 21 ಮಾದರಿಯ ದೈಹಿಕ ಅಸಮರ್ಥತೆಗಳು ಸೇರ್ಪಡೆಯಾಗಿವೆ. ದೈಹಿಕ ಅಸಮರ್ಥರ ಹಕ್ಕುಗಳ ಕಾಯ್ದೆ (ಆರ್‌ಪಿಡಿಎ)ಯನ್ನು ಜಾರಿಗೊಳಿಸಲು ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವಿದೆ. ಅದೇ ವೇಳೆ, ಅಂತರ್‌ರಾಷ್ಟ್ರೀಯ ಸನ್ನದುಗಳು ಮತ್ತು ಒಪ್ಪಂದಗಳು, ಅದರಲ್ಲೂ ಮುಖ್ಯವಾಗಿ ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸನ್ನದು (ಯುಎನ್‌ಸಿಆರ್‌ಪಿಡಿ)ಅನ್ನು ಜಾರಿಗೊಳಿಸುವ ಹೊಣೆಗಾರಿಕೆಯೂ ಕೇಂದ್ರ ಸರಕಾರ ಮತ್ತು ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಪಿಡಬ್ಲುಡಿ)ಗೆ ಇದೆ. 2019ರಲ್ಲಿ, ವಿಕಲಚೇತನರ ನೈಜ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿನ ಅನುದಾನವನ್ನು ಒದಗಿಸಬೇಕು ಎಂಬುದಾಗಿ ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕುರಿತ ಸಮಿತಿಯು ಶಿಫಾರಸು ಮಾಡಿತ್ತು.

ಅಂಗವೈಕಲ್ಯ ಕುರಿತ 2018ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ ವರದಿಯ ಪ್ರಕಾರ, ಚಲನೆಗೆ ಸಂಬಂಧಿಸಿದ ಅಸಮರ್ಥತೆ ಹೊಂದಿರುವವರ ಪೈಕಿ 24 ಶೇಕಡ, ದೃಷ್ಟಿ ದೋಷ ಹೊಂದಿರುವವರ ಪೈಕಿ 31 ಶೇಕಡ ಮತ್ತು ಶ್ರವಣ ದೋಷ ಇರುವವರ ಪೈಕಿ 19 ಶೇಕಡ ಜನರಿಗೆ ಮಾತ್ರ ಪೂರಕ ಸಲಕರಣೆಗಳನ್ನು ಪಡೆಯಲು ಸಾಧ್ಯವಾಗಿದೆ. 2020-21ರ ಡಿಇಪಿಡಬ್ಲುಡಿ ವಾರ್ಷಿಕ ವರದಿಯ ಪ್ರಕಾರ, ಪೂರಕ ಸಲಕರಣೆಗಳ ವಿತರಣೆಯಲ್ಲಿ ಇಳಿಕೆಯಾಗಿದೆ. ಹಾಗಾಗಿ, ಪೂರಕ ಸಲಕರಣೆಗಳ ವಿತರಣೆಯನ್ನು ಹೆಚ್ಚಿಸುವುದಕ್ಕಾಗಿ ಸರಕಾರ ದೊಡ್ಡ ಪ್ರಮಾಣದಲ್ಲಿ ಮಧ್ಯ ಪ್ರವೇಶ ಮಾಡಬೇಕಾಗಿತ್ತು.

ಸೆಂಟರ್ ಫಾರ್ ಬಜೆಟ್ ಆ್ಯಂಡ್ ಗವರ್ನನ್ಸ್ ಅಕೌಂಟಬಿಲಿಟಿ ಸಂಸ್ಥೆಯು 2022 ಫೆಬ್ರವರಿಯಲ್ಲಿ ‘ಇನ್ ಸರ್ಚ್ ಆಫ್ ಇನ್‌ಕ್ಲುಸಿವ್ ರಿಕವರಿ’ ಎಂಬ ಹೆಸರಿನ ವರದಿಯೊಂದನ್ನು ಪ್ರಕಟಿಸಿತು. ‘ನೆರವು ಮತ್ತು ಸಲಕರಣೆಗಳಿಗಾಗಿ ವಿಕಲಚೇತನರಿಗೆ ಸಹಾಯ (ಎಡಿಐಪಿ)’ ಯೋಜನೆಗೆ ನೀಡಲಾಗುತ್ತಿರುವ ಅನುದಾನದಲ್ಲಿ ಪದೇ ಪದೇ ಕಡಿತಗಳನ್ನು ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

2020-21ರ ಸಾಲಿನಲ್ಲಿ ಈ ಯೋಜನೆಯಡಿಯಲ್ಲಿ ಮಾಡಲಾಗಿರುವ ವಾಸ್ತವಿಕ ಖರ್ಚು 189 ಕೋಟಿ ರೂ. ಆಗಿತ್ತು. ಆದರೆ, ಮೂಲ ಬಜೆಟ್‌ನಲ್ಲಿ 230 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿತ್ತು. 2021-22ರಲ್ಲಿ ಮೂಲ ಬಜೆಟ್‌ನಲ್ಲಿ 220 ಕೋಟಿ ರೂ. ಒದಗಿಸಲಾಗಿತ್ತು. ಆದರೆ ಅದನ್ನು ಅಂತಿಮವಾಗಿ 180 ಕೋಟಿ ರೂ.ಗೆ ಕಡಿತಗೊಳಿಸಲಾಗಿತ್ತು. ಅದೇ ರೀತಿ, 2020-21ರಲ್ಲಿ ದೀನದಯಾಳು ಉಪಾಧ್ಯಾಯ ಪರಿಹಾರ ಯೋಜನೆಗೆ ಒದಗಿಸಲಾದ ಅನುದಾನವನ್ನು 130 ಕೋಟಿ ರೂ.ಯಿಂದ 83 ಕೋಟಿ ರೂ.ಗೆ ಕಡಿತಗೊಳಿಸಲಾಯಿತು. ಮುಂದಿನ ವರ್ಷ (2021-22)ದ ಬಜೆಟ್‌ನಲ್ಲಿ 125 ಕೋಟಿ ರೂ.ಯನ್ನು ಒದಗಿಸಲಾಯಿತಾದರೂ, ಅಂತಿಮವಾಗಿ ಅದನ್ನು 105 ಕೋಟಿ ರೂ.ಗೆ ಕಡಿತಗೊಳಿಸಲಾಯಿತು.

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಅನುಷ್ಠಾನ ಕಾಯ್ದೆ (ಎಸ್‌ಐಪಿಡಿಎ)ಯಡಿಯಲ್ಲಿ ಬರುವ ಯೋಜನೆಗೆ 2019-20ರ ಬಜೆಟ್‌ನಲ್ಲಿ 315 ಕೋಟಿ ರೂ.ಯನ್ನು ಒದಗಿಸಲಾಗಿತ್ತಾದರೂ, ಅಂತಿಮವಾಗಿ 217 ಕೋಟಿ ರೂ.ಯನ್ನು ಮಾತ್ರ ಖರ್ಚು ಮಾಡಲಾಯಿತು. ಮುಂದಿನ ವರ್ಷ (2020-21) 252 ಕೋಟಿ ರೂ.ಯನ್ನು ಬಜೆಟ್‌ನಲ್ಲಿ ಘೋಷಿಸಲಾಯಿತು ಹಾಗೂ ಅದನ್ನು ಅಂತಿಮವಾಗಿ 103 ಕೋಟಿ ರೂ.ಗೆ ಇಳಿಸಲಾಯಿತು. 2021-22ರಲ್ಲಿ 210 ಕೋಟಿ ರೂ.ಯನ್ನು ಬಜೆಟ್‌ನಲ್ಲಿ ಘೋಷಿಸಲಾಯಿತು. ಈ ಅನುದಾನ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಅದನ್ನು ಅಂತಿಮವಾಗಿ 147 ಕೋಟಿ ರೂ.ಗೆ ಇಳಿಸಲಾಯಿತು.

ಸ್ಕಾಲರ್‌ಶಿಪ್ ಯೋಜನೆಗಳಿಗೆ ನೀಡುವ ಅನುದಾನಗಳನ್ನು ಗಮನಿಸಿದರೆ, ಹಿಂದಿನ ಮೂರು ವರ್ಷಗಳಲ್ಲಿಯೂ ಕಡಿತ ಮಾಡಲಾಗಿದೆ. 2020-21ರಲ್ಲಿ ಸ್ವಾಯತ್ತ ಸಂಸ್ಥೆಗಳಿಗೆ 466 ಕೋಟಿ ರೂ. ಒದಗಿಸಲಾಗಿತ್ತು. ಆದರೆ, ಅಂತಿಮವಾಗಿ ಆ ವರ್ಷ ಖರ್ಚು ಮಾಡಿದ್ದು 281 ಕೋಟಿ ರೂ. ಮಾತ್ರ. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ನೀಡುತ್ತಿರುವ ಅನುದಾನದಲ್ಲೂ ಕಳೆದ ಮೂರು ವರ್ಷಗಳಲ್ಲಿ ಕಡಿತ ಮಾಡಲಾಗಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವಿಕಲಚೇತನ ಪಿಂಚಣಿ ಯೋಜನೆಗೆ ಒದಗಿಸಲಾಗುತ್ತಿರುವ ಅನುದಾನವೂ ಕಡಿಮೆಯಾಗಿದೆ ಹಾಗೂ ಹಲವು ವರ್ಷಗಳಿಂದ ಅದು ಇದ್ದಲ್ಲೇ ಇದೆ. ಅಷ್ಟೇ ಅಲ್ಲದೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅದು ಹಲವು ಕಡಿತಗಳನ್ನು ಅನುಭವಿಸಿದೆ.

 ವಿಕಲಚೇತನರು ಯಾವತ್ತೂ ಸಮಾಜಕ್ಕೆ ಹೊರೆ ಅಲ್ಲ. ಅದನ್ನು ಈಗಾಗಲೇ ಹಲವು ಸಾಧನೆಗಳ ಮೂಲಕ ಅವರು ಸಾಬೀತು ಮಾಡಿದ್ದಾರೆ. ಆದರೆ ಅವರ ಸಬಲೀಕರಣಕ್ಕೆ ಸರಕಾರದ ಪ್ರೋತ್ಸಾಹದ ಅಗತ್ಯವಿದೆ. ಅವರ ಮೇಲೆ ಹೂಡಿದ ಯಾವ ಹಣವೂ ವ್ಯರ್ಥವಾಗುವುದಿಲ್ಲ. ಎನ್ನುವ ಸತ್ಯವನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಸರಕಾರದ ನಿರ್ಲಕ್ಷದಿಂದ ಮುಂದಿನ ದಿನಗಳಲ್ಲಿ ಈ ವಿಕಲ ಚೇತನರ ಬದುಕು ಕಷ್ಟ ದಾಯಕವಾಗಬಹುದು. ಸಂಪನ್ಮೂಲವಾಗಬೇಕಾಗಿದ್ದ ವಿಕಲ ಚೇತನರು ಸರಕಾರದ ಆರೈಕೆಯಿಲ್ಲದೆ ಸದ್ದಿಲ್ಲದೆ ಬಾಡಿ ಮುದುಡಿ ಹೋಗಬಹುದು. ಆದುದರಿಂದ, ಸರಕಾರ ತನ್ನ ಬಜೆಟ್‌ನಲ್ಲಿರುವ ವೈಕಲ್ಯಗಳನ್ನು ತಿದ್ದಿಕೊಂಡು ವಿಕಲಚೇತನರ ಕಡೆಗೆ ಸಹಾಯ ಹಸ್ತ ಚಾಚಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X