ಉಕ್ರೇನ್ ವಿರುದ್ಧ ರಷ್ಯಾದ ಕಾರ್ಯಾಚರಣೆ ಬೆನ್ನಲ್ಲೇ ಬ್ಯಾರೆಲ್‍ಗೆ 100 ಡಾಲರ್ ದಾಟಿದ ಅಂತಾರಾಷ್ಟ್ರೀಯ ತೈಲ ಬೆಲೆ

ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ ತೈಲ ಬೆಲೆಗಳು ಕಳೆದ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಬ್ಯಾರೆಲ್‍ಗೆ 100 ಡಾಲರ್ ಗಡಿಯನ್ನು ದಾಟಿವೆ. ಈ ಹಿಂದೆ ಸೆಪ್ಟೆಂಬರ್ 2014 ರಲ್ಲಿ ತೈಲ ಬೆಲೆಗಳು ಬ್ಯಾರೆಲ್‍ಗೆ 100 ಡಾಲರ್ ಗಡಿಯನ್ನು ತಲುಪಿದ್ದವು.
ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ ಪೂರ್ವ ಯುರೋಪ್‍ನಲ್ಲಿ ಪೂರ್ಣ-ಪ್ರಮಾಣದ ಸಂಘರ್ಷಕ್ಕೆ ಇದು ನಾಂದಿ ಹಾಡಬಹುದು ಎಂಬ ಕಳವಳ ಮೂಡಿದೆ ಹಾಗೂ ತೈಲ ಬೆಲೆ ಬ್ಯಾರೆಲ್‍ಗೆ 100.94 ಡಾಲರ್ ತಲುಪಿದೆ.
ಇತ್ತೀಚಿನ ಕೆಲ ವಾರಗಳಿಂದ ತೈಲ ಬೆಲೆಗಳು ಸಾಕಷ್ಟು ಏರಿಕೆ ಕಂಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.
Next Story





