ಉಕ್ರೇನ್ನಲ್ಲಿ ಸಿಲುಕಿದ್ದರೆ ನೆರವಿಗಾಗಿ ಕರೆ ಮಾಡಲು ದ.ಕ ಜಿಲ್ಲಾಧಿಕಾರಿ ಮನವಿ

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.
ಮಂಗಳೂರು, ಫೆ. 24: ಉಕ್ರೇನ್ನಲ್ಲಿ ಜಿಲ್ಲೆಯ ನಾಗರಿಕರು ಸಿಲುಕಿಕೊಂಡಲ್ಲಿ ಅವರಿಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ನೆರವು ಅಗತ್ಯವಿದ್ದರೆ ಈ ಕುರಿತಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಕೋರಲಾಗಿದೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ನಂ. 1077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಅದೇ ರೀತಿ ಹತ್ತಿರದ ತಹಶೀಲ್ದಾರರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೂ ಮಾಹಿತಿ ನೀಡುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story





