ರಷ್ಯಾ ಆಕ್ರಮಣದ ವಿರುದ್ಧ ದೇಶ ರಕ್ಷಿಸಲು ನಾಗರಿಕರಿಗೆ ಶಸ್ತ್ರಾಸ್ತ್ರ ನೀಡಲು ಮುಂದಾದ ಉಕ್ರೇನ್ ಅಧ್ಯಕ್ಷ

ಹೊಸದಿಲ್ಲಿ: ರಷ್ಯಾದ ಆಕ್ರಮಣದ ವಿರುದ್ಧ ತಮ್ಮ ದೇಶವನ್ನು ರಕ್ಷಿಸಲು ಬಯಸುವ ಎಲ್ಲಾ ಉಕ್ರೇನ್ ನಾಗರಿಕರಿಗೆ ಸರಕಾರ ಶಸ್ತ್ರಾಸ್ತ್ರ ಒದಗಿಸಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೈಮೈರ್ ಝೆನೆನ್ಸ್ಕಿ ಹೇಳಿದ್ದಾರೆ.
"ತಮ್ಮ ಆತ್ಮಸಾಕ್ಷಿಯನ್ನು ಕಳೆದುಕೊಳ್ಳದೇ ಇರುವವರೆಲ್ಲರೂ ಉಕ್ರೇನ್ ವಿರುದ್ಧದ ಯುದ್ಧವನ್ನು ವಿರೋಧಿಸುವ ಸಮಯ ಬಂದಿದೆ. ಉಕ್ರೇನ್‍ನ ಎಲ್ಲಾ ನಾಗರಿಕರ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ ಹಾಗೂ ತಮ್ಮ ದೇಶವನ್ನು ರಕ್ಷಿಸಲು ಅವರ ಕೈಗಳಿಗೆ ಅಸ್ತ್ರಗಳನ್ನು ನೀಡುತ್ತೇವೆ" ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್‍ಗೆ ತನ್ನ ಸೇನಾಪಡೆಗಳನ್ನು ಕಳುಹಿಸುವ ರಷ್ಯಾದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುವಂತೆಯೂ ಅವರು ತಮ್ಮ ನಾಗರಿಕರಿಗೆ ಮನವಿ ಮಾಡಿದ್ದಾರೆ.
ರಷ್ಯಾದ ದಾಳಿಯನ್ನು ನಾಝಿಗಳ ದಾಳಿಗೆ ಅವರು ಹೋಲಿಸಿದ್ದಾರೆ. "ರಷ್ಯಾ ಕುತಂತ್ರದಿಂದ ನಮ್ಮ ದೇಶವನ್ನು ನಾಝಿ ಜರ್ಮನಿಯಂತೆ ದಾಳಿ ನಡೆಸಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
Next Story





