ಮಾ.1ರಿಂದ ಸಂಗೊಳ್ಳಿ ರಾಯಣ್ಣ ರೈಲಿನಲ್ಲಿ ಮತ್ತೆ ಕಾದಿರಿಸದ ಬೋಗಿಗಳ ಸೇವೆ ಲಭ್ಯ
ಉಡುಪಿ, ಫೆ.24: ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಕಾರವಾರ ಮಧ್ಯೆ ದಿನನಿತ್ಯ ಸಂಚರಿಸುವ ರೈಲು ನಂ. 16595/16596 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪಂಚಗಂಗಾ ದೈನಂದಿನ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಕಾದಿರಿಸದ ಬೋಗಿಗಳ ಸೇವೆ ಹಿಂದಿನಂತೆ ಪ್ರಯಾಣಿಕರಿಗೆ ಮಾ.1ರಿಂದ ಲಭ್ಯವಾಗಲಿದೆ.
ಕೋವಿಡ್-19ರ ಬಳಿಕ ಈ ರೈಲಿನ ಎಲ್ಲಾ ಬೋಗಿಗಳನ್ನು ಕಾದಿರಿಸಿದ ಬೋಗಿಗಳಾಗಿ ಪರಿವರ್ತಿಸಲಾಗಿತ್ತು. ಇದೀಗ ಎರಡು ಬೋಗಿಗಳನ್ನು ಮತ್ತೆ ಕಾದಿರಿಸದ ಬೋಗಿಗಳಾಗಿ (ಅನ್ ರಿಸರ್ವಡ್) ಮಾ.1ರಿಂದ ಸೇರ್ಪಡೆ ಗೊಳಿಸಲಾಗುತ್ತಿದೆ. ಪ್ರಯಾಣದ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story